ನಟಿ ಮೀರಾ ಜಾಸ್ಮಿನ್ ದಾಂಪತ್ಯದಲ್ಲಿ ಬಿರುಕು?
ದಕ್ಷಿಣ ಭಾರತದ ಖ್ಯಾತಿ ನಟಿ ಮೀರಾ ಜಾಸ್ಮಿನ್ ಪತಿ ಅನಿಲ್ ಜಾನ್ ಟಿಟೂಸ್ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದ್ದು ಅನಿಲ್ ಜತೆ ಜೀವನ ನಡೆಸಲಾರೆ ಎಂದು ನಟಿ ಹೇಳುತ್ತಿದ್ದಾರೆ...
ದಕ್ಷಿಣ ಭಾರತದ ಖ್ಯಾತಿ ನಟಿ ಮೀರಾ ಜಾಸ್ಮಿನ್ ಪತಿ ಅನಿಲ್ ಜಾನ್ ಟಿಟೂಸ್ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದ್ದು ಅನಿಲ್ ಜತೆ ಜೀವನ ನಡೆಸಲಾರೆ ಎಂದು ನಟಿ ಹೇಳುತ್ತಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ವಿಚ್ಛೇದನ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಈ ಹಿಂದೆ ಮಲೈಕಾ ಅರೋರಾ, ಕರೀಷ್ಮಾ ಕಪೂರ್, ಸುಸೇನ್ ಖಾನ್ ವಿಚ್ಛೇದಿತರಾಗಿದ್ದು ಇತ್ತೀಚೆಗಷ್ಟೇ ಅಮಲಾ ಪೌಲ್ ಸಹ ಪತಿಯಿಂದ ವಿಚ್ಛೇದನ ಪಡೆದಿದ್ದರು. ಈ ಸಾಲಿಗೆ ಮೀರಾ ಜಾಸ್ಮಿನ್ ಸೇರಲಿದ್ದಾರೆ.
ಇತ್ತೀಚೆಗಷ್ಟೇ ವಿವಾಹವಾಗಿದ್ದ ಮೀರಾ ಜಾಸ್ಮಿನ್ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದ್ದು ನಟಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಸುದ್ದಿಯಾಗಿದ್ದಾರೆ.
ವಿಚ್ಛೇದನಕ್ಕೆ ಕಾರಣ ಅನಿಲ್ ಜಾನ್ ವಿಚ್ಛೇದಿತರಾಗಿದ್ದು ಇದೀಗ ಮೊದಲ ಪತ್ನಿಯ ಕಾಟ ಶುರುವಾಗಿದೆಯಂತೆ ಇದರಿಂದ ಬೇಸತ್ತು ಮೀರಾ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.