ಸಿನಿಮಾ ಸುದ್ದಿ

'ರಾಗ'ದಲ್ಲಿ ಭಾಮಾರ ಕನಸಿನ ಪಾತ್ರ!

Guruprasad Narayana
ಬೆಂಗಳೂರು: ಸಿನೆಮಾದ ಮೊದಲ ನೋಟ ಬಿಡುಗಡೆ ಮಾಡುವ ಮೂಲಕ ಸಂಗೀತಮಯ ಸಿನೆಮಾ 'ರಾಗ' ಚಿತ್ರತಂಡ ಸುದ್ದಿಯಲ್ಲಿದೆ. ಈ ಸಿನೆಮಾದ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ 'ಮಿತ್ರ' ಅವರ ಮೊದಲ ನೋಟ ಪ್ರಶಂಸೆಗೆ ಕಾರಣವಾಗಿತ್ತು ಮತ್ತು ಈಗ ಪ್ರಧಾನ ನಟಿ ಭಾಮಾ ಒಳಗೊಂಡ ಸ್ಟಿಲ್ ಬಿಡುಗಡೆ ಮಾಡಿದ್ದಾರೆ. 
ಈ ಮೊದಲ ನೋಟ ತಿಳಿಸುವಂತೆ ಅವರು ಕೂಡ ಅಂಧರ ಪಾತ್ರವನ್ನು ನಟಿಸುವಂತೆ ಕಾಣುತ್ತಿದೆ. ಪಿ ಸಿ ಶೇಖರ್ ನಿರ್ದೇಶನದ ಈ ಸಿನೆಮಾದಲ್ಲಿ ನಟಿಸುತ್ತಿರುವ ಭಾಮಾ ಕೊನೆಗೆ ಪ್ರಜ್ವಲ್ ದೇವರಾಜ್ ಅವರ 'ಅರ್ಜುನ' ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. "ಇದು ಅವರ ಕನಸಿನ ಪಾತ್ರವಾಗಿದ್ದು, ಅವರ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಅವರು ನಂಬಿದ್ದಾರೆ. ಅವರಿಗೆ ಕಥೆ ಹೇಳಿದ ಮೇಲೆ ಅವರು ಎಷ್ಟು ಸಂತಸರಾದರೆಂದರೆ, ಹೀರೊ ಯಾರು ಎಂದು ಕೇಳದೆಯೂ ಈ ಯೋಜನೆ ಒಪ್ಪಿಕೊಂಡರು" ಎಂದು ಚಿತ್ರತಂಡದ ಸದಸ್ಯರೊಬ್ಬರು ತಿಳಿಸುತ್ತಾರೆ. 
ಈ ಪಾತ್ರಕ್ಕಾಗಿ ಭಾಮಾ ತಮ್ಮ ನೋಟವನ್ನು ಬಹಳ ಬದಲಿಸಕೊಳ್ಳಬೇಕಾಯಿತಂತೆ. "ಅಂಧರು ಹೇಗೆ ವರ್ತಿಸುತ್ತಾರೆ ಮತ್ತು ಪ್ರತಿಕ್ರಿಯಿಸುತ್ತಾರೆ ಎಂದು ತಿಳಿಯಲು ಅವರೇ ಅಧ್ಯಯನದಲ್ಲಿ ತೊಡಗಿಸಿಕೊಂಡರು. ಮಿತ್ರ ಅವರ ದೈಹಿಕ ಗುಣಗಳಿಗೆ ಅವರು ಹೊಂದಿಕೊಳ್ಳಲು ೮ ಕೆಜಿ ತೂಕ ಹೆಚ್ಚಿಸಿಕೊಳ್ಳಬೇಕಿತ್ತು" ಎಂದು ತಿಳಿಸುತ್ತವೆ ಮೂಲಗಳು. 
ಶೇಖರ್ ಅವರ ಸಿನೆಮಾವನ್ನು ಮಿತ್ರ ಅವರು ನಿರ್ಮಿಸುತ್ತಿದ್ದು, ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಚಿತ್ರೀಕರಣ ಬಹುತೇಕ ಸಂಪೂರ್ಣಗೊಂಡಿದೆ ಎನ್ನುತ್ತವೆ ಮೂಲಗಳು. 
SCROLL FOR NEXT