ಮುಂಬಯಿ: ಜುಹು ಪ್ರದೇಶದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಸಂಬಂಧ ಬಾಲಿವುಡ್ ನಟ ಅರ್ಜನ್ ಕಪೂರ್ ಗೆ ಬೃಹನ್ ಮುಂಬಯಿ ಮುನಿಸಿಪಲ್ ಕಾರ್ಪೋರೇಷನ್ ನೊಟೀಸ್ ನೀಡಿದೆ.
ಅರ್ಜುನ್ ಕಪೂರ್ ಬಿಎಂಸಿ ಅನುಮತಿ ಪಡೆಯದೇ 30*16 ಅಡಿ ಜಾಗ ಒತ್ತುವರಿ ಮಾಡಿಕೊಂಡು ಮೇಲ್ಚಾವಣಿ ಬ್ರಿಕ್ ರೂಮ್ ನಿರ್ಮಿಸಿಕೊಂಡಿದ್ದಾರೆ ಎಂದು ಬಿಎಂಸಿ ತಿಳಿಸಿದೆ.
ಈ ಸಂಬಂಧ ಈ ವರ್ಷದ ಮಾರ್ಚ್ ನಲ್ಲಿ ಅರ್ಜುನ್ ಕಪೂರ್ ಬಿಎಂಸಿ ಮೊದಲ ನೋಟಿಸ್ ನೀಡಿತ್ತು. ಆದರೆ ಇದಕ್ಕೆ ನಟನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲ್ಲಿಲ್ಲ, ಹೀಗಾಗಿ ಕಳೆದ ವಾರ ಬಿಎಂಸಿ ಮತ್ತೊಂದು ನೊಟೀಸ್ ನೀಡಿ, ಪಾಲಿಕೆ ಸಿಬ್ಬಂದಿ ಅನಧಿಕೃತ ವಾಗಿ ನಿರ್ಮಾಣಮಾಡಿಕರುವ ಕೊಠಡಿಯನ್ನು ತೆರವುಗೊಳಿಸಲಿದೆ ಎಂದು ನೊಟೀಸ್ ನಲ್ಲಿ ತಿಳಿಸಿದೆ.