ಬಿಗ್ ಬಾಸ್ ಮನೆಯಿಂದ ಹೊರಬರುತ್ತಲೇ ನಟಿ ಪೂಜಾ ಗಾಂಧಿ ಫುಲ್ ಬ್ಯುಸಿಯಾಗಿದ್ದಾರೆ. ಪೂಜಾ ತಮ್ಮ ಮುಂದಿನ ಸಿನಿಮಾಗೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಪೂಜಾ ಅಭಿನಯಿಸುತ್ತಿರುವ ಮುಂದಿನ ಸಿನಿಮಾ ದಂಡುಪಾಳ್ಯ ಪಾರ್ಟ್-2. ಈ ಹಿಂದೆ ದಂಡು ಪಾಳ್ಯ ಮೊದಲ ಭಾಗದಲ್ಲಿ ಪೂಜಾ ಕಾಣಿಸಿಕೊಂಡಿದ್ದರು. ಅಲ್ಲಿ ಖರ್ತನಾಕ್ ಕಳ್ಳಿಯಾಗಿ ಕಾಣಿಸಿಕೊಂಡಿದ್ದ ಪೂಜಾ ಇದೀಗ ಮತ್ತೆ ಕಳ್ಳಿಯಾಗಲು ರೆಡಿಯಾಗಿದ್ದಾರೆ.
ನಾಲ್ಕು ವರ್ಷದ ಬಳಿಕ ದಂಡುಪಾಳ್ಯ ಪಾರ್ಟ್-2 ಸಿನಿಮಾವನ್ನು ಮಾಡಲಾಗ್ತಿದೆ. ಪೂಜಾ ಗಾಂಧಿ ಬಿಗ್ ಬಾಸ್ ಮನೆಗೆ ಹೋಗದಿದ್ದರೇ ಈ ಹಿಂದೆಯೇ ಸಿನಿಮಾದ ಶೂಟಿಂಗ್ ಆರಂಭವಾಗುತ್ತಿತ್ತು.
ದಂಡುಪಾಳ್ಯ ಪಾರ್ಟ್-2 ಸಿನಿಮಾವನ್ನು ಶ್ರೀನಿವಾಸ್ ರಾಜು ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಈ ಹಿಂದೆ ದಂಡುಪಾಳ್ಯ ಮೊದಲ ಭಾಗದಲ್ಲಿ ಕೆಲಸ ಮಾಡಿದ್ದ ತಾಂತ್ರಿಕ ತಂಡವೇ ಈ ಸಿನಿಮಾದಲ್ಲಿ ಕೂಡ ಕೆಲಸ ಮಾಡಲಿದೆಯಂತೆ. ಎಲ್ಲಾ ಅಂದುಕೊಂಡಂತೆ ಆದ್ರೆ ಶೀಘ್ರದಲ್ಲೇ ದಂಡುಪಾಳ್ಯ ಪಾರ್ಟ್-2 ಸಿನಿಮಾ ಸೆಟ್ಟೇರಲಿದೆ.