ರಕ್ಷಿತಾ 
ಸಿನಿಮಾ ಸುದ್ದಿ

ಪ್ರೇಮ್ 'ಕಲಿ'ಯಲ್ಲಿ ರಕ್ಷಿತಾ

ನಿರ್ದೇಶಕ-ನಟ ಪ್ರೇಮ, ದೊಡ್ಡ ಬಜೆಟ್ ಚಿತ್ರವಾದ 'ಕಲಿ'ಯನ್ನು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಿರ್ದೇಶಿಸಲು ಸಿದ್ಧರಾಗುತ್ತಿದ್ದಾರೆ. ಈ ಸಿನೆಮಾದಲ್ಲಿ

ಬೆಂಗಳೂರು: ನಿರ್ದೇಶಕ-ನಟ ಪ್ರೇಮ, ದೊಡ್ಡ ಬಜೆಟ್ ಚಿತ್ರವಾದ 'ಕಲಿ'ಯನ್ನು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಿರ್ದೇಶಿಸಲು ಸಿದ್ಧರಾಗುತ್ತಿದ್ದಾರೆ. ಈ ಸಿನೆಮಾದಲ್ಲಿ ಸುದೀಪ್ ಮತ್ತು ಶಿವಾರಜಕುಮಾರ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದು, ಈಗ ತಾಜಾ ಸುದ್ದಿಯ ಪ್ರಕಾರ ನಿರ್ದೇಶಕನ ಪತ್ನಿ ರಕ್ಷಿತಾ ಕೂಡ ಸಿನೆಮಾದಲ್ಲಿ ಪಾತ್ರ ಪಡೆಯಲಿದ್ದಾರಂತೆ.

ಪುನೀತ್ ರಾಜಕುಮಾರ್ ಅವರ ಮೊದಲ ಚಿತ್ರ 'ಅಪ್ಪು'ವಿನಲ್ಲಿ ನಟಿಸಿದ್ದ ರಕ್ಷಿತಾ ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗಗಳಲ್ಲಿ ನೆಲೆಯೂರಿದ್ದರು. ೨೦೦೭ರಲ್ಲಿ 'ತಾಯಿ ಮಡಿಲು' ಸಿನೆಮಾದಲ್ಲಿ ನಟಿಸಿದ ನಂತರ ನಟನೆಯನ್ನು ಕೈಬಿಟ್ಟಿದ್ದ ಅವರು ತಮ್ಮ ಪತಿಯ ನಿರ್ಮಾಣ ಮತ್ತು ನಿರ್ದೇಶನ ಕಾರ್ಯಗಳಿಗೆ ಹೆಗಲಾಗಿದ್ದರು. ಅಲ್ಲದೆ ಕಿರುತೆರೆಯ ಕೆಲವು ಕಾರ್ಯಕ್ರಮಗಳಿಗೆ ತೀರ್ಪುಗಾರ್ತಿಯಾಗಿಯೂ ಕಾಣಿಸಿಕೊಂಡಿದ್ದರು. ಈಗ ಪ್ರೇಮ್ ನಿರ್ದೇಶನದ 'ಕಲಿ'ಯಲ್ಲಿ ನಟಿಸಲು ಮನಸ್ಸು ಮಾಡಿದ್ದು, ಬೆಳ್ಳಿತೆರೆಗೆ ಹಿಂದಿರುಗಲಿದ್ದಾರೆ ಎಂದಿವೆ ಮೂಲಗಳು.

ಮತ್ತೊಂದು ಆಸಕ್ತಿದಾಯಕ ಸುದ್ದಿಯಲ್ಲಿ ಪ್ರೇಮ್ ಈ ಸಿನೆಮಾದ ನಾಯಕ ನಟಿಯ ಪಾತ್ರಕ್ಕೆ ಅನುಷ್ಕಾ ಶೆಟ್ಟಿಯವರ ಜೊತೆಗೆ ಮಾತುಕತೆ ನಡೆಸಲಿದ್ದಾರಂತೆ. "ಮಾತುಕತೆ ಜಾರಿಯಲ್ಲಿದೆ. ಎಲ್ಲವು ಒಪ್ಪಿಗೆಯಾದರೆ ಅನುಷ್ಕಾ ಈ ಸಿನೆಮಾದಲ್ಲಿ ನಟಿಸಲಿದ್ದಾರೆ. ಈ ಹಿಂದೆ ಬಾಲಿವುಡ್ ನಟಿಯರಾದ ಮಲ್ಲಿಕಾ ಶೆರಾವತ್ ಮತ್ತು ಸನ್ನಿ ಲಿಯೋನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದ ಕೀರ್ತಿ ಪ್ರೇಮ್ ರದ್ದು. ಈಗ ನಯನತಾರ ಮತ್ತು ಅನುಷ್ಕಾ ಶೆಟ್ಟಿ ಜೊತೆಗೆ ಮಾತುಕತೆ ನಡೆಸಿದ್ದಾರೆ" ಎನ್ನುತ್ತವೆ ಮೂಲಗಳು.

ಅಲ್ಲದೆ ಸುದೀಪ್ ಮೂರು ಭಾಷೆಗಳಲ್ಲೂ ಕಾಣಿಸಿಕೊಳ್ಳಲಿದ್ದು ಶಿವರಾಜ್ ಕುಮಾರ್ ಕನ್ನಡ ಚಿತ್ರದಲ್ಲಿ ಮಾತ್ರ ನಟಿಸಲಿದ್ದಾರಂತೆ. ತೆಲುಗು ಮತ್ತು ತಮಿಳು ಚಿತ್ರರಂಗದ ದೊಡ್ಡ ನಟರ ಜೊತೆಗೆ ಕೆಲಸ ಮಾಡಲು ಪ್ರೇಮ್ ನಾಟಕ ನಟರ ಶೋಧನೆಯಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT