ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ನಡೆಸಿಕೊಡುವ "ಸೂಪರ್ ಮಿನಿಟ್'ನ ಎರಡನೆಯ ಸೀಸನ್ ಶನಿವಾರದಿಂದ ಆರಂಭವಾಗುತ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9.00ರಿಂದ 10.30ರವರೆಗೆ ಪ್ರಸಾರವಾಗಲಿದೆ.
ಈ ಕಾರ್ಯಕ್ರಮದಲ್ಲಿ ಈ ಬಾರಿ ಸಾರ್ವಜನಿಕರು ಭಾಗವಹಿಸುತ್ತಿರುವುದು. ಪ್ರತಿ ಎಪಿಸೋಡಿಗೂ ಬೇರೆ ಬೇರೆ ವೃತ್ತಿಯ ಏಳು ಸ್ಪರ್ಧಿಗಳು ಪರಸ್ಪರ ಆಡುತ್ತಾರೆ. ಆ ನಂತರ ಕೊನೆಯ ಹಂತದಲ್ಲಿ ಸೆಲೆಬ್ರಿಟಿಯೊಬ್ಬರ ಜೊತೆಗೆ ಸೆಣೆಸಾಡಲಿದ್ದಾರಂತೆ.
ಸ್ಪರ್ಧಿಗೆ ತುಂಬಾ ಹಣದ ಅವಶ್ಯಕತೆ ಇದೆ ಎಂದನಿಸಿದರೆ, ಆಗ ಅವರನ್ನು ಕರೆಸಿಕೊಳ್ಳಲಾಗುತ್ತದಂತೆ. ಈ ಬಾರಿ ಬೇರೆ ಬೇರೆ ವೃತ್ತಿಯಲ್ಲಿ ಇರುವವರನ್ನು ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡಲಾಗುತ್ತದಂತೆ. ಈ ಬಾರಿ ಕಾಲೇಜು ಹುಡುಗಿಯರು, ರಾಜಕಾರಣಿಗಳು, ಪತ್ರಕರ್ತರು ... ಹೀಗೆ ಬೇರೆಬೇರೆ ವೃತ್ತಿಯಲ್ಲಿರುವವರನ್ನು ಆಯ್ಕೆ ಮಾಡಲಾಗುತ್ತದಂತೆ.
ಕಳೆದ ಬಾರಿಯೇ ಪಬ್ಲಿಕ್ ಸೀಸನ್ ಮಾಡಬೇಕು ಎಂಬ ಯೋಚನೆ ಇತ್ತಂತೆ. ಅಷ್ಟೇ ಅಲ್ಲ, ಸೆಲೆಬ್ರಿಟಿಗಳ ಹತ್ತಿರ ದುಡ್ಡಿರುವುದರಿಂದ, ಅವರನ್ನೇ ಮತ್ತೆ ಏಕೆ ಬೆಳಸಬೇಕು ಎಂಬ ಪ್ರಶ್ನೆಯೂ ಹಲವರಿಗೆ ಬಂದಿತ್ತಂತೆ. ಆದರೆ, ಕಾರ್ಯಕ್ರಮವನ್ನು ಜನಪ್ರಿಯ ಮಾಡಬೇಕು ಮತ್ತು ಆಟಗಳನ್ನು ಪರಿಚಯಿಸುವುದಕ್ಕೆ ಸೆಲೆಬ್ರಿಟಿಗಳಿಂದ ಕಳೆದ ಬಾರಿ ಆಡಿಸಲಾಗಿತ್ತಂತೆ. ಈಗ ಕಾರ್ಯಕ್ರಮ ಮತ್ತು ಅದರಲ್ಲಿನ ಆಟಗಳು ಜನಪ್ರಿಯವಾಗಿರುವುದರಿಂದ ಸಾಮಾನ್ಯ ಜನರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನೀಡಲಾಗುತ್ತಿದೆ.