ಬೆಂಗಳೂರು: ಹಲವಾರು ನಟರಿಗೆ ಕಂಠದಾನ ಮಾಡಿರುವ ನಟ ಪುನೀತ್ ರಾಜಕುಮಾರ್ ಈಗ ಮೊದಲ ಬಾರಿಗೆ ನಟ ಗಣೇಶ್ ಅವರ ಚಿತ್ರದಲ್ಲಿ ಹಾಡಲಿದ್ದಾರೆ. ಪ್ರಶಾಂತ್ ರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಗಣೇಶ್ ಅವರ ನೂತನ ಚಿತ್ರ 'ಜೂಮ್'ನ ಹಾಡಿದು. ಶುಕ್ರವಾರ ಪುನೀತ್ ಹಾಡಿರುವ ಈ ಹಾಡು ರೆಕಾರ್ಡ್ ಆಗಿದೆ.
ಈ ಹಾಡಿಗೆ ಸಾಹಿತ್ಯ ರಚನೆ ಮಾಡಿರುವ ನಿರ್ದೇಶಕ, ಪುನೀತ್ ಧ್ವನಿಯಲ್ಲಿ ಹಾಡು ದ್ಭುತವಾಗಿ ಮೂಡಿ ಬಂದಿದೆ ಎನ್ನುತ್ತಾರೆ. "ನಾನು ಈ ಸಿನೆಮಾದ ಶೀರ್ಷಿಕೆ ಹಾಡು 'ರಾಜಾದಿ ರಾಜ... ರಾಜ ಮಾರ್ತಾಂಡ... ರಾಜ ಮಾಣಿಕ್ಯ... ರಾಜ ಬೇರುಂಢ' ಹಾಡು ಬರೆಯುವಾಗ ಪುನೀತ್ ಅವರೇ ತಲೆಯಲ್ಲಿತ್ತು. ಇದು ಹೀರೋ ನನ್ನು ಹೊಗಳಲು ಬರೆದಿರುವ ಮಾಸ್ ಹಾಡು. ಕೊನೆಗೂ ಪುನೀತ್ ಅವರು ಒಪ್ಪಿಕೊಂಡರು" ಎಂದು ಸಂತಸ ವ್ಯಕ್ತಪಡಿಸುತ್ತಾರೆ.
ಫೆಬ್ರವರಿ ಕೊನೆಯಲ್ಲಿ ಸಿನೆಮಾದ ಆಡಿಯೋ ಬಿಡುಗಡೆಯಾಗಲಿದೆ.