ಅಂಬರೀಷ್ ಮತ್ತು ಶರಣ್ 
ಸಿನಿಮಾ ಸುದ್ದಿ

ರಾಜ್-ವಿಷ್ಣು ಸಿನಿಮಾ ದಲ್ಲಿ ಅಂಬರೀಷ್ ಗೆ ಶರಣ್ ತಾತನ ಪಾತ್ರ

ತಮಿಳಿನ ರಜನಿ-ಮುರುಗನ್ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಲಾಗುತ್ತಿದೆ. ಕನ್ನಡದಲ್ಲಿ ರಾಜ್-ವಿಷ್ಣು ಎಂಬ ಟೈಟಲ್ ನಲ್ಲಿ ಸಿನಿಮಾ ನಿರ್ಮಾಪಕ ರಾಮು ಸಿನಿಮಾ ಮಾಡುತ್ತಿದ್ದಾರೆ....

ತಮಿಳಿನ ರಜನಿ-ಮುರುಗನ್ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಲಾಗುತ್ತಿದೆ. ಕನ್ನಡದಲ್ಲಿ ರಾಜ್-ವಿಷ್ಣು ಎಂಬ ಟೈಟಲ್ ನಲ್ಲಿ ಸಿನಿಮಾ ನಿರ್ಮಾಪಕ ರಾಮು ಸಿನಿಮಾ ಮಾಡುತ್ತಿದ್ದಾರೆ.

ಈಗಾಗಲೇ ತಮಿಳಿನ ರಜನಿ-ಮುರುಗನ್ ಸಿನಿಮಾ ಹಕ್ಕನ್ನು ಖರೀದಿಸಿರುವ ರಾಮು ಕನ್ನಡದ ನೇಟಿವಿಟಿಗೆ ಹೊಂದಿಕೊಳ್ಳುವಂತೆ ಚಿತ್ರ ತಯಾರಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ಲೆಜೆಂಡ್ ಗಳಾದ ಡಾ. ರಾಜ್ ಕುಮಾರ್ ಹಾಗೂ ಡಾ. ವಿಷ್ಣುವರ್ಧನ್ ಅವರ ಹೆಸರನ್ನು ಚಿತ್ರಕ್ಕೆ ಇಡಲಾಗಿದೆ.

ಕಾಮಿಡಿ ಮನೋರಂಜನಾ ಚಿತ್ರವಾಗಿದೆ. ಅರಸು, ಆಕಾಶ್ ಹಾಗೂ ತೆಲುಗಿನ ಈಗ ಚಿತ್ರಕ್ಕೆ ಸಂಭಾಷಣೆ ಬರೆದಿದ್ದ   ಜನಾರ್ಧನ ಮಹರ್ಷಿ ರಾಜ್ -ವಿಷ್ಣು ಚಿತ್ರಕ್ಕೂ ಸಂಭಾಷಣೆ ಬರೆದಿದ್ದಾರೆ.  

ತಮಿಳಿನಲ್ಲಿ ರಜನಿಕಾಂತ್ ಅಭಿಮಾನಿ ಅಚ್ಯುತರಾವ್ ನಟಿಸಿದ್ದ ಪಾತ್ರದಲ್ಲಿ ಕನ್ನಡಲ್ಲಿ ಶರಣ್ ಅಭಿನಯಿಸುತ್ತಿದ್ದಾರೆ. ಇದರ ಮತ್ತೊಂದು ವಿಶೇಷತೆ ಎಂದರೆ ಶರಣ್ ತಾತನಾಗಿ ರೆಬೆಲ್ ಸ್ಟಾರ್ ಅಂಬರೀಷ್  ಗೌಡ್ರ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಚಿತಾ ರಾಮ್ ಡೇಟ್ ಹೊಂದಿಕೆಯಾದರೇ ಆಕೆಯೇ ಚಿತ್ರದ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಇನ್ನು ಶರಣ್ ಜೊತೆ  ಚಿಕ್ಕಣ್ಣ ಸಾಧು ಕೋಕಿಲಾ ಹಾಗೂ ರವಿಶಂಕರ್ ಕೂಡಾ ಚಿತ್ರದಲ್ಲಿ ಅಭಿನಯಿಸಲಿದ್ದು, ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ ಎಂದು ರಾಮು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?