ಭರತನಾಟ್ಯ ನೃತ್ಯಗಾರ್ತಿ ಮತ್ತು ನೃತ್ಯನಿರ್ದೇಶಕಿ ರುಕ್ಮಿಣಿ ದೇವಿ ಅರುಂಡೇಲ್ 
ಸಿನಿಮಾ ಸುದ್ದಿ

ಭರತನಾಟ್ಯ ನೃತ್ಯಗಾರ್ತಿ ರುಕ್ಮಿಣಿ ದೇವಿ ನೆನಪಿನಲ್ಲಿ ಗೂಗಲ್ ಡೂಡಲ್

ಭರತನಾಟ್ಯ ನೃತ್ಯಗಾರ್ತಿ ಮತ್ತು ನೃತ್ಯನಿರ್ದೇಶಕಿ ರುಕ್ಮಿಣಿ ದೇವಿ ಅರುಂಡೇಲ್ ಅವರ ೧೧೨ ಜನ್ಮ ವರ್ಷಾಚರಣೆ ಅಂಗವಾಗಿ ದೂಡಲ್ ಬಿಡಿಸುವ ಮೂಲಕ ಗೂಗಲ್ ಗೌರವ

ನವದೆಹಲಿ: ಭರತನಾಟ್ಯ ನೃತ್ಯಗಾರ್ತಿ ಮತ್ತು ನೃತ್ಯನಿರ್ದೇಶಕಿ ರುಕ್ಮಿಣಿ ದೇವಿ ಅರುಂಡೇಲ್ ಅವರ ೧೧೨ ಜನ್ಮ ವರ್ಷಾಚರಣೆ ಅಂಗವಾಗಿ ದೂಡಲ್ ಬಿಡಿಸುವ ಮೂಲಕ ಗೂಗಲ್ ಗೌರವ ಸಲ್ಲಿಸಿದೆ.

೧೯೦೪ ಫೆಬ್ರವರಿ ೨೯ ರಂದು ಜನಿಸಿದ್ದ ರುಕ್ಮಿಣಿ ದೇವಿ, ಭಾರತೀಯ ಶಾಸ್ತ್ರೀಯ ನೃತ್ಯದ ಪುನರುಜ್ಜೀವನದ ಹರಿಕಾರರಲ್ಲಿ ಒಬ್ಬರು ಎಂದೇ ಪರಿಗಣಿಸಲಾಗುತ್ತದೆ.

೧೯೨೦ ರಲ್ಲಿ ಈ ಕಲೆಯನ್ನು ಕೀಳು ಎಂದು ಹಲವು ಮೂಲಗಳಿಂದ ವಿರೋಧ ಬಂದರೂ, ರುಕ್ಮಿಣಿ ದೇವಿ ಹಠ ತೊಟ್ಟು ಪರಿಣಿತಿ ಪಡೆದರು ಎಂದು ದಾಖಲಿಸಲಾಗಿದೆ. ಮೊದಲಿಗೆ ಸಾಧಿರ್ ಎಂದು ಕರೆಯಲ್ಪಡುತ್ತಿದ್ದ ಭರತನಾಟ್ಯ ಶಾಸ್ತ್ರೀಯ ನೃತ್ಯದ ಹೊಸ ಹೆಸರಿಗೆ ಇ ಕೃಷ್ಣ ಅಯ್ಯರ್ ಮತ್ತು ರುಕ್ಮಿಣಿ ದೇವಿ ಅರುಂಡೇಲ್ ಕಾರಣ ಎನ್ನಲಾಗುತ್ತದೆ. ಇದಕ್ಕೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟವರೂ ಅವರೇ.

1977 ರಲ್ಲಿ ಮೊರಾರ್ಜಿ ದೇಸಾಯಿ ಅವರು ರುಕ್ಮಿಣಿ ದೇವಿ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ನೇಮಕ ಮಾಡಿದ್ದರು, ಅದನ್ನು ಅವರು ನಿರಾಕರಿಸಿದ್ದರು.

ರುಕ್ಮಿಣಿ ದೇವಿ ಅವರ ಸಾಧನೆಗಾಗಿ ಪದ್ಮ ಭೂಷಣ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್