ಸಿನಿಮಾ ಸುದ್ದಿ

ತಮಿಳು ಕಾಮಿಡಿ ನಟ ಕುಮಾರಿಮುತ್ತು ವಿಧಿವಶ

Shilpa D

ಚೆನ್ನೈ: ತನ್ನ ಅತ್ಯದ್ಭುತ ವಿಶಿಷ್ಟ ಮ್ಯಾನರಿಸಂ ಗಳಿಂದ ಅಭಿಮಾನಿಗಳನ್ನು ರಂಜಿಸುತ್ತಿದ್ದ ತಮಿಳಿನ ಹಿರಿಯ ಕಾಮಿಡಿ ನಟ ಕುಮಾರಿಮುತ್ತು ಕಳೆದ ಭಾನುವಾರ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ 77 ವರ್ಷದ ಕುಮಾರಿಮುತ್ತು ಚೆನ್ನೈ ನ ಕಾವೇರಿ ಆಸ್ಪತ್ರೆಯಯಲ್ಲಿ ಕೊನೆಯುಸಿರೆಳೆದಿದ್ದಾರೆ.

30 ವರ್ಷಗಳ ಕಾಲ ತಮಿಳು ಸಿನಿಮಾ ಪ್ರೇಕ್ಷಕರನ್ನು ರಂಜಿಸಿದ ಕುಮಾರಿ ಮುತ್ತು ಸುಮಾರು 50 ಸಿನಿಮಾಗಳಲ್ಲಿ ಅಭಿನಯಿಸಿದ್ದರು.

ಇದು ನಮ್ಮ ಆಲು, ಸಹದೇವನ್ ಮಹದೇವನ್, ಊರು, ಊರ್ಲಾ ಊರು ರಾಜಕುಮಾರಿ, ಮಾರ್ಮುಗಂ ಇವರು ನಟಿಸಿದ ಪ್ರಮುಖ ಚಿತ್ರಗಳಾಗಿವೆ.

SCROLL FOR NEXT