ವಿರಾಟ್ ಸಿನೆಮಾದಲ್ಲಿ ಚಾಲೆಂಜಿಗ್ ಸ್ಟಾರ್ ದರ್ಶನ್ 
ಸಿನಿಮಾ ಸುದ್ದಿ

ಜನವರಿ ೨೨ ಕ್ಕೆ 'ವಿರಾಟ್' ದರ್ಶನ

ನಾಲ್ಕು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ 'ವಿರಾಟ್' ಕೊನೆಗೂ ಜನವರಿ ೨೨ಕ್ಕೆ ಬಿಡುಗಡೆ ಕಾಣಲಿದೆ.

ಬೆಂಗಳೂರು: ನಾಲ್ಕು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ 'ವಿರಾಟ್' ಕೊನೆಗೂ ಜನವರಿ ೨೨ಕ್ಕೆ ಬಿಡುಗಡೆ ಕಾಣಲಿದೆ.

ಎಚ್ ವಾಸು ಅವರ ಈ ಯೋಜನೆ ಆಗಸ್ಟ್ ೨೦೧೩ರಲ್ಲಿ ಪ್ರಾರಂಭವಾಗಿತ್ತು. "ಈ ಮನರಂಜನಾ ಚಿತ್ರ, ರಾಜ್ಯವನ್ನು ತೊಂದರೆಗೀಡು ಮಾಡಿರುವ ವಿದುಚ್ಛಕ್ತಿ ತೊಂದರೆಯ ಬಗ್ಗೆ ಚರ್ಚಿಸಲಿದೆಯಂತೆ" ಎನ್ನುತ್ತಾರೆ ನಿರ್ದೇಶಕ ವಾಸು.

ಎನ್ ಕುಮಾರ್ ಸಿನೆಮಾದ ವಿತರಣಾ ಹಕ್ಕುಗಳನ್ನು ಕೊಂಡಿದ್ದು, ಈಗ ಪ್ರಮುಖ ಚಿತ್ರಮಂದಿರದ ಶೋಧನೆಯಲ್ಲಿದ್ದಾರೆ. ಕರ್ನಾಟಕದಾದ್ಯಂತ ೨೫೦-೩೦೦ ಚಿತ್ರಮಂದಿರಗಳಲ್ಲಿ ಸಿನೆಮಾ ತೆರೆಕಾಣಲಿದೆ ಎನ್ನಲಾಗಿದೆ.

ದರ್ಶನ್ ವಿರಾಟ್ ಆಗಿದ್ದರೆ ಉಳಿತ ತಾರಾಗಣ ಇಶಾ ಚಾವ್ಲಾ, ವಿದಿಶಾ ಶ್ರೀವಾಸ್ತವ್, ಚೈತ್ರ ಚಂದ್ರನಾಥ್, ಸುಹಾಸಿನಿ ಮಣಿರತ್ನಂ, ಸುಮಲತಾ, ಪಿ ರವಿಶಂಕರ್, ಶ್ರೀನಿವಾಸ್ ಮೂರ್ತಿ, ಸಾಧು ಕೋಕಿಲಾ ಮತ್ತು ಬುಲೆಟ್ ಪ್ರಕಾಶ್ ಕೂಡ ನಟಿಸಿದ್ದಾರೆ.

ಸಿನೆಮಾಗೆ ವಿ ಹರಿಕೃಷ್ಣ ಅವರ ಸಂಗೀತವಿದ್ದು, ಕೆ ವಿ ಕೃಷ್ಣ ಕುಮಾರ್ ಅವರ ಸಿನೆಮ್ಯಾಟೋಗ್ರಫಿ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಜಲಸಂಧಿ ಬಂದ್: ಅಮೆರಿಕಾ ಭೀಕರ ಪ್ರತಿಕಾರದ ದಾಳಿ, ಮಧ್ಯಪ್ರಾಚ್ಯದಲ್ಲಿ ಮತ್ತೆ ಭುಗಿಲೆದ್ದ ಸಂಘರ್ಷ..!

ಸಂಪುಟ ವಿಸ್ತರಣೆಗೆ ಕೌಂಟ್‌ಡೌನ್: ಸಿದ್ದು-ಡಿಕೆಶಿ, ಹರಿಪ್ರಸಾದ್'ಗೆ 'ಕೈ' ಕಮಾಂಡ್ ಬುಲಾವ್, ದೆಹಲಿಯಲ್ಲಿ ನಿರ್ಣಾಯಕ ಸಭೆ..!

ಸಾರಿಗೆ ಸಚಿವ byrati suresh ದಿಢೀರ್ ಸಿಟಿ ರೌಂಡ್ಸ್, ರಾತ್ರೋರಾತ್ರಿ BMTC ಚಾಲಕ, ನಿರ್ವಾಹಕರಿಗೆ ಅಮಾನತು ಶಾಕ್, Video

'ತಪ್ಪು ನಿರ್ಧಾರ ತೆಗೆದುಕೊಂಡಿದ್ದೀರಿ, ಅದರ ಬೆಲೆ ತೆರಬೇಕಾಗುತ್ತದೆ': Hormuz ಬಂದ್ ಮಾಡಿದ ಇರಾನ್, ಅಮೆರಿಕ ಮತ್ತೊಂದು ವೈಮಾನಿಕ ದಾಳಿ

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!