ರಿಕ್ಕಿ ಸಿನೆಮಾದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯ 
ಸಿನಿಮಾ ಸುದ್ದಿ

'ರಿಕ್ಕಿ'ಗೆ ಯು/ಎ ಪ್ರಮಾಣಪತ್ರ; ಜನವರಿ ೨೯ಕ್ಕೆ ಬಿಡುಗಡೆ

ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯ ನಟನೆಯ 'ರಿಕ್ಕಿ'ಗೆ ಸೆನ್ಸಾರ್ ಮಂಡಲಿಯ ಹಸಿರು ನಿಶಾನೆ ಸಿಕ್ಕಿದ್ದು, ಯು/ಎ ಪ್ರಮಾಣಪತ್ರ ಪಡೆದಿದೆ. ಏಳು ಕಡೆ ಮಾತಿಗೆ ಬೀಪ್ ಹಾಕಿರುವುದಲ್ಲದೆ

ಬೆಂಗಳೂರು: ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯ ನಟನೆಯ 'ರಿಕ್ಕಿ'ಗೆ ಸೆನ್ಸಾರ್ ಮಂಡಲಿಯ ಹಸಿರು ನಿಶಾನೆ ಸಿಕ್ಕಿದ್ದು, ಯು/ಎ ಪ್ರಮಾಣಪತ್ರ ಪಡೆದಿದೆ. ಏಳು ಕಡೆ ಮಾತಿಗೆ ಬೀಪ್ ಹಾಕಿರುವುದಲ್ಲದೆ ಎರಡು ಕಡೆ ಬದಲಾವಣೆಗೆ ಸೆನ್ಸಾರ್ ಮಂಡಲಿ ಸೂಚಿಸಿದೆ.

"ಸೆನ್ಸಾರ್ ಮಂಡಲಿ ಸದಸ್ಯರು ಸಿನೆಮಾ ನೋಡುವಾಗ ಆತಂಕಗೊಂಡಿದ್ದೆ" ಎಂದ ನಿರ್ದೇಶಕ ರಿಶಬ್ ಶೆಟ್ಟಿ, ಮಂಡಲಿಯಿಂದ ಹೊರಬಂದ ಮೇಲೆ ನಿಟ್ಟುಸಿರು ಬಿಟ್ಟಿದ್ದಾರೆ.

"ಯಾವಾಗ ನಕ್ಸಲರ ಮತ್ತು ಪೊಲೀಸರ ಚರ್ಚೆ ಬರುತ್ತದೋ ಆಗ ಕೆಲವು ಪ್ರಶ್ನೆಗಳು ಏಳುವುದು ಸಹಜ. ಆದುದರಿಂದ ತುಸು ಆತಂಕವಿತ್ತು ಆದರೆ ಎಲ್ಲವೂ ಸುಸೂತ್ರವಾಗಿ ನಡೆಯಿತು" ಎಂದಿರುವ ರಿಶಬ್ ಇನ್ನೆರಡು ದಿನಗಳಲಿ ಪ್ರಮಾಣ ಪತ್ರ ದೊರೆತ ಮೇಲೆ ಸಿನೆಮಾ ಬಿಡುಗಡೆಗೆ ಸಜ್ಜಾಗಲಿದ್ದೇವೆ ಎಂದಿದ್ದಾರೆ.

ಇದಕ್ಕೂ ಮುಂಚೆ ನಿರ್ಮಾಪಕ ಜನವರಿ ೨೨ಕ್ಕೆ ಸಿನೆಮಾ ಬಿಡುಗಡೆ ಮಾಡಲು ಮುಂದಾಗಿದ್ದರೂ ಈಗ ಒಂದು ವಾರದ ಮಟ್ಟಿಗೆ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದು ೨೯ಕ್ಕೆ ಸಿನೆಮಾ ತೆರೆ ಕಾಣಲಿದೆ. "ಇದೇ ಸಮಯಕ್ಕೆ ಹಲವಾರು ಸಿನೆಮಾಗಳು ಬಿಡುಗಡೆಯಾಗುತ್ತಿರುವುದರಿಂದ ಚಿತ್ರಮಂದಿರಗಳ ಕೊರತೆ ಇದೆ. ಸಿನೆಮಾ ಆಗಲೇ ಆಸಕ್ತಿ ಕೆರಳಿಸಿದೆ ಆದುದರಿಂದ ನಾವು ತ್ವರಿತವಾಗಿ ಬಿಡುಗಡೆ ಮಾಡುವ ಅಗತ್ಯವಿಲ್ಲ. ಅದಕ್ಕೆ ಒಂದು ವಾರ ಬಿಡುಗಡೆಯನ್ನು ಮುಂದೂಡಿದ್ದೇವೆ" ಎನ್ನುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel