ಬೆಂಗಳೂರು: ನಟ ದರ್ಶನ್ ಅಭಿನಯದ ಜನವರಿ ೨೨ ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಅಂದು ಸಿನೆಮಾ ಬಿಡುಗಡೆಯ ಬಗ್ಗೆ ಅಪಸ್ವರ ಎತ್ತಿದ್ದಾರೆ ದರ್ಶನ್.
ಜನವರಿಯಲ್ಲಿ ಹಲವಾರು ಸಿನೆಮಾಗಳು ತೆರೆ ಕಾಣುತ್ತಿವೆ. ನನ್ನ ಸಿನೆಮಾ ಬಿಡುಗಡೆಯಾದರೆ ಇತರ ಸಣ್ಣ ಬಜೆಟ್ ಸಿನೆಮಾಗಳಿಗೆ ತೊಂದರೆಯಾಗಬಹುದೆಂಬ ಕಾಳಜಿಯೊಂದಿಗೆ ಸಿನೆಮಾ ಬಿಡುಗಡೆಯನ್ನು ಮುಂದೂಡಲು ನಿರ್ಮಾಪಕ ಕಲ್ಯಾಣ್ ಅವರಿಗೆ ಫೇಸ್ಬುಕ್ ನಲ್ಲಿ ಮನವಿ ಮಾಡಿದ್ದಾರೆ. ಈಗಾಗಲೇ ೨ ವರ್ಷ ತಡವಾಗಿದೆ, ಬಿಡುಗಡೆ ಇನ್ನೆರಡು ವಾರ ಮುಂದೂಡಿದರೆ ಏನೂ ಆಗುವುದಿಲ್ಲ ಎಂದು ಕೂಡ ಅವರು ಹೇಳಿದ್ದಾರೆ.
ಎರಡು ವರ್ಷಗಳಿಂದ ಕುಂಟುತ್ತಾ ಬಂದು ಕೊನೆಗೂ ಸಂಪೂರ್ಣಗೊಂಡಿದ್ದ ಸಿನೆಮಾ ಬಿಡುಗಡೆ ಸಮಯದಲ್ಲಿ ದರ್ಶನ್ ಅಪಸ್ವರ ಎತ್ತಿರುವುದು ನಿರ್ಮಾಪಕ ಕಲ್ಯಾಣ್ ಅವರಿಗೆ ಬೇಸರ ತಂದಿದೆ ಎನ್ನುತ್ತವೆ ಮೂಲಗಳು. ಆದರೆ ಇದನ್ನು ಒಪ್ಪಿ ಬಿಡುಗಡೆ ಮುಂದೂಡುತ್ತರೋ ಅಥವಾ ನಿಗದಿತ ದಿನಾಂಕಕ್ಕೆ ಬಿಡುಗಡೆ ಮಾಡುತ್ತಾರೋ ಕಾದು ನೋಡಬೇಕಿದೆ.