'ಮಾಸ್ತಿ ಗುಡಿ' ಸಿನೆಮಾದಲ್ಲಿ ದುನಿಯಾ ವಿಜಯ್ 
ಸಿನಿಮಾ ಸುದ್ದಿ

ಹೊಸ ಅವತಾರದಲ್ಲಿ ದುನಿಯಾ ವಿಜಯ್

ನಾಗಶೇಖರ್ ನಿರ್ದೇಶನದ 'ಮಾಸ್ತಿ ಗುಡಿ' ಸಿನೆಮಾದಲ್ಲಿ ನಟ ವಿಜಯ್ ೭೦ ವರ್ಷದ ಮುದುಕನಾಗಿಯೂ ಕಾಣಿಸಿಕೊಳ್ಳುತ್ತಿರುವುದು ವಿಶೇಷ. "ನಾನು ೧೮ ರಿಂದ ೩೩ ರಿಂದ ೭೦ ವರ್ಷದವರೆಗೂ

ಬೆಂಗಳೂರು: ನಾಗಶೇಖರ್ ನಿರ್ದೇಶನದ 'ಮಾಸ್ತಿ ಗುಡಿ' ಸಿನೆಮಾದಲ್ಲಿ ನಟ ವಿಜಯ್ ೭೦ ವರ್ಷದ ಮುದುಕನಾಗಿಯೂ ಕಾಣಿಸಿಕೊಳ್ಳುತ್ತಿರುವುದು ವಿಶೇಷ. "ನಾನು ೧೮ ರಿಂದ ೩೩  ರಿಂದ ೭೦ ವರ್ಷದವರೆಗೂ ಬೆಳೆಯುತ್ತೇನೆ" ಎಂದಿದ್ದಾರೆ ಈ ಸಿನೆಮಾಗಿ ಗಡ್ಡ ಬೆಳೆಸಿಕೊಂಡಿರುವ ವಿಜಯ್.

ಈಗ ತಮ್ಮ ದೇಹದ ತೂಕ ಇಳಿಸಿಕೊಳ್ಳಲು ೨೦ ದಿನ ಸಮಯಾವಕಾಶವಿದೆಯಂತೆ. "ನಾನೀಗ ವೆಯ್ಟ್ ಲಿಫ್ಟಿಂಗ್ ಮಾಡುವ ಹಾಗಿಲ್ಲ. ದಿನಕ್ಕೆ ೧೦-೧೨ ಕಿಮೀ ಓಡಬೇಕಾಗಿದೆ" ಎನ್ನುತ್ತಾರೆ.

ಇದು ಹುಲಿಗಳನ್ನು ಸಂರಕ್ಷಿಸುವ ವಿಷಯದ ಸಿನೆಮಾ ಆಗಿರುವುದರಿಂದ ವಿಜಯ್ ಅವರಿಗೆ ಸಿನೆಮಾ ಬಗ್ಗೆ ವಿಶೇಷ ಪ್ರೀತಿಯಂತೆ. "ಮಾಸ್ತಿ ಗುಡಿ ಮಕ್ಕಳಿಗೂ ಒಳ್ಳೆಯ ಸಿನೆಮಾ ಆಗಬೇಕು. ಇದನ್ನು ಅತ್ಯುತ್ತಮವಾಗಿ ಮಾಡಲು ಬಹಳ ಪ್ರಯತ್ನಿಸುತ್ತಿದ್ದೇವೆ. ಇದು ಸಂಪೂರ್ಣಗೊಳ್ಳುವವರೆಗೂ ಬೇರೆ ಇನ್ಯಾವ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಿಲ್ಲ" ಎಂದಿದ್ದಾರೆ ವಿಜಯ್.

ವಿಜಯ್ ೭೦ ವರ್ಷದವನ ಪಾತ್ರದಿಂದ ಸಿನೆಮಾ ಪ್ರಾರಂಭವಾಗಿ ಹಿಮ್ಮುಖವಾಗಿ ನಡೆಯಲಿದೆ ಎನ್ನುತ್ತಾರೆ ನಿರ್ದೇಶಕ. ವಿಜಯ್ ಅವರಿಗೆ ಈ ಮೇಕಪ್ ಮಾಡಲು ನಾಲ್ಕು ಘಂಟೆಗಳು ಹಿಡಿಯಿತಂತೆ. ಇದು ಸತ್ಯ ಕಥೆ ಆಧಾರಿತ ಸಿನೆಮಾ ಎನ್ನುತ್ತಾರೆ ನಾಗಶೇಖರ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!