ಬೆಂಗಳೂರು: ದರ್ಶನ್ ನಟನೆಯ 'ವಿರಾಟ್' ಬಿಡುಗಡೆ ಮುಂದಕ್ಕೆ ಹೋಗಿದ್ದರೂ, ನಟನ ಅಭಿಮಾನಿಗಳ ಉತ್ಸಾಹಕ್ಕಂತೂ ಕುಂದಾಗಿಲ್ಲ. ಜೊತೆಗೆ 'ವಿರಾಟ್'ನಲ್ಲಿ ನಟಿಸಿರುವ ಮೂವರು ನಟಿಯರಾದ ಚೈತ್ರ ಚಂದ್ರನಾಥ್, ವಿದಿಶಾ ಶ್ರೀವಾಸ್ತವ ಮತ್ತು ಇಶಾ ಚಾವ್ಲಾ ಕೂಡ ಅತ್ಯಂತ ಉತ್ಸುಕರಾಗಿ ಕಾಯುತ್ತಿದ್ದಾರೆ.
ಎಚ್ ವಾಸು ನಿರ್ದೇಶನದ ಈ ಚಿತ್ರದಲ್ಲಿ ಮೂವರೂ ನಟಿಯರು ಮತ್ತೊಂದು ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಅದರ ಸೆನ್ಸಾರ್ ಕೂಡ ಆಗಿದೆ. ಈಗ ಆ ಹಾಡು ಸಿನೆಮಾದಲ್ಲಿ ಸೇರ್ಪಡೆಯಾಗಲಿದೆ.
ನಟಿ ಚೈತ್ರಾಗೆ 'ಡಿಕೆ' ಸಿನೆಮಾದ ನಂತರ ಇದು ಎರಡನೆಯ ಕನ್ನಡ ಚಿತ್ರವಾಗಿದ್ದರೆ, ಸಹೋದರಿಯರಾದ ವಿದಿಶಾ ಶ್ರೀವಾಸ್ತವ ಮತ್ತು ಶಾನ್ವಿ ಶ್ರೀವಾಸ್ತವ ಒಟ್ಟಿಗೆ ನಟಿಸುತ್ತಿರುವುದು ವಿಶೇಷ.