ಉಪೇಂದ್ರ ಮತ್ತು ಸುದೀಪ್ 
ಸಿನಿಮಾ ಸುದ್ದಿ

ಸುದೀಪ್ ಮತ್ತು ಉಪ್ಪಿ ಈಗ ಮುಕುಂದ ಮುರಾರಿ

ಹಿಂದಿ ಸಿನೆಮಾ 'ಓ ಮೈ ಗಾಡ್' ನ ರಿಮೇಕ್ ಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗಿದೆ. ಮೊದಲಿಗೆ ಈ ಸಿನೆಮಾದ ಕನ್ನಡ ಅವತರಿಣಿಕೆಯನ್ನು

ಬೆಂಗಳೂರು: ಹಿಂದಿ ಸಿನೆಮಾ 'ಓ ಮೈ ಗಾಡ್' ನ ರಿಮೇಕ್ ಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗಿದೆ. ಮೊದಲಿಗೆ ಈ ಸಿನೆಮಾದ ಕನ್ನಡ ಅವತರಿಣಿಕೆಯನ್ನು 'ಕೃಷ್ಣ ನೀ ಬೇಗನೆ ಬಾರೋ' ಎಂದಿತ್ತಾದರೂ, ಈಗ 'ಮುಕುಂದ ಮುರಾರಿ' ಎಂದು ಬದಲಿಸಲಾಗುದೆ. ಇದರ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲವಾದರೂ, ಮೂಲಗಳ ಪ್ರಕಾರ ''ಕೃಷ್ಣ ನೀ ಬೇಗನೆ ಬಾರೋ' ಹೆಸರು ಅತಿ ಸಾಮಾನ್ಯ ಎಂದೆನಿಸಿದ್ದರಿಂದ 'ಮುಕುಂದ ಮುರಾರಿ' ಎಂದು ಬದಲಿಸಲಾಗಿದೆ ಎಂದು ತಿಳಿದುಬಂದಿದೆ.

ನಂದಕಿಶೋರ್ ನಿರ್ದೇಶನದ ಈ ಸಿನೆಮಾದಲ್ಲಿ ಇಬ್ಬರು ಜನಪ್ರಿಯ ನಟರು ಒಟ್ಟಿಗೆ ಬಂದಿರುವುದು ವಿಶೇಷ. ಉಪೇಂದ್ರ ಮತ್ತು ಸುದೀಪ್ ಒಟ್ಟಿಗೆ ನಟಿಸುತ್ತಿರುವ ಈ ಸಿನೆಮಾ ಫೆಬ್ರವರಿ ೧೧ಕ್ಕೆ ಚಿತ್ರೀಕರಣ ಪ್ರಾರಂಭಿಸಲಿದೆ ಎನ್ನಲಾಗಿದೆ.

ನಾಯಕ ನಟಿಯ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಉಪೇಂದ್ರ ಎದುರು ನಟಿಸಲು 'ಪ್ರೇಮ' ಅವರ ಜೊತೆಗೆ ಮಾತುಕತೆ ನಡೆಸಲಾಗಿದೆ ಎನ್ನಲಾಗಿದೆ. ಅಲ್ಲದೆ ಸದಾ, ರಮ್ಯಕೃಷ್ಣ ಇವರ ಹೆಸರುಗಳೂ ಚಾಲ್ತಿಯಲ್ಲಿವೆ. ಹಿಂದಿ ಅವತರಿಣೆಕೆಯಲ್ಲಿ ಪತ್ರಕರ್ತೆ ಪಾತ್ರ ವಹಿಸಿದ್ದ ನಿಧಿ ಸುಬ್ಬಯ್ಯ ಅವರೇ ಕನ್ನಡದಲ್ಲೂ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರವಿಶಂಕರ್, ಅವಿನಾಶ್ ಕೂಡ ತಾರಗಣದಲ್ಲಿದ್ದು, ಅರ್ಜುನ್ ಜನ್ಯ ಸಂಗೀತ ಸಿನೆಮಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್