ಸಿನಿಮಾ ಸುದ್ದಿ

ಮಹಿಳಾ ಪ್ರಧಾನ "ಊರ್ವಿ"ಯಲ್ಲಿ ಅಚ್ಯುತ್ ಕುಮಾರ್ "ಖಳನಾಯಕ"

Srinivasamurthy VN

ಬೆಂಗಳೂರು: ನವ ನಿರ್ದೇಶಕ ಪ್ರದೀಪ್ ವರ್ಮಾ ಅವರ ಮೊದಲ ಪ್ರಯತ್ನ ಊರ್ವಿಗೆ ಖ್ಯಾತ ಸಹನಟ ಅಚ್ಯುತ್ ಕುಮಾರ್ ಖಳನಾಯಕರಾಗಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಸಾಕಷ್ಟು ಚಿತ್ರಗಳಲ್ಲಿ ಎದುರಾಳಿ ಪಾತ್ರಗಳಲ್ಲಿ ಅಚ್ಯುತ್ ಕುಮಾರ್ ಕಾಣಿಸಿಕೊಂಡಿದ್ದರಾದರೂ ಪೂರ್ಣ ಪ್ರಮಾಣದ ಖಳನಾಯಕರಾಗಿ ಕಾಣಿಸಿಕೊಂಡಿರಲಿಲ್ಲ. ಇದೀಗ ಊರ್ವಿ ಚಿತ್ರದ  ಮೂಲಕ ಅಚ್ಯುತ್ ಕುಮಾರ್ ಪೂರ್ಣ ಪ್ರಮಾಣದ ಖಳನಾಯಕರಾಗಿ ಕಾಣಿಸಿಕೊಳ್ಳಲ್ಲಿದ್ದಾರೆ. ವಿಶೇಷವೆಂದರೆ ಊರ್ವಿ ಚಿತ್ರ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಚಿತ್ರದಲ್ಲಿ ಐದು ನಾಯಕಿಯರು  ಇರಲಿದ್ದಾರೆ. ಈ ಎಲ್ಲ ಐದೂ ನಾಯಕಿಯರಿಗೂ ಅಚ್ಯುತ್ ಕುಮಾರ್ ಒಬ್ಬರೇ ಖಳನಾಯಕರಂತೆ.

ಇನ್ನು ಚಿತ್ರದ ನಾಯಕಿರಯ ಪಟ್ಟಿ ಈಗಾಗಲೇ ಅಂತಿಮವಾಗಿದ್ದು, ಶೃತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್, ಭವಾನಿ ಪ್ರಕಾಶ್ ಮತ್ತು ಜಾಹ್ನವಿ ಅವರು ನಾಯಕಿಯರಾಗಿ  ಆಯ್ಕೆಯಾಗಿದ್ದಾರೆ. ಇನ್ನು ಚಿತ್ರದಲ್ಲಿ ಅಚ್ಯುತ್ ಕುಮಾರ್ ಅವರ ಪಾತ್ರ ವಿಶೇಷವಾಗಿರಲಿದೆ ಎಂದು ನಿರ್ದೇಶಕ ಪ್ರದೀಪ್ ವರ್ಮಾ ಹೇಳಿಕೊಂಡಿದ್ದು, ಚಿತ್ರದಲ್ಲಿ ಅಚ್ಯುತ್ ಕುಮಾರ್  ಹೊಡೆದಾಟ-ಬಡಿದಾಟಗಳಲ್ಲಿ ಪಾಲ್ಗೊಳ್ಳುವುದಿಲ್ಲವಂತೆ. ಆದರೂ ಅಚ್ಯುತ್ ಕುಮಾರ್ ಖಳನಾಯಕರಂತೆ. ಅದು ಹೇಗೆ ಎಂದು ಕೇಳಿದರೆ ಚಿತ್ರದಲ್ಲಿ ಅಚ್ಯುತ್ ಕುಮಾರ್ ಭಿನ್ನಪಾತ್ರದಲ್ಲಿ  ಕಾಣಿಸಿಕೊಳ್ಳಲಿದ್ದು, ಚಿತ್ರದ ನಾಯಕಿಯರು ಸೇರಿದಂತೆ ಅನ್ಯರ ಕಷ್ಟಗಳನ್ನು ನೋಡಿ ನಗುವ ಮನಸ್ಥಿತಿಯವರಂತೆ. ಹಾಲಿವುಡ್ ಬ್ಯಾಟ್ ಮನ್ ಚಿತ್ರದಲ್ಲಿ ಬರುವ ಜೋಕರ್ ಪಾತ್ರದ ಶೇಡ್  ಊರ್ವಿಯಲ್ಲಿ ಅಚ್ಯುತ್ ಕುಮಾರ್ ಅವರ ಪಾತ್ರಕ್ಕೆ ಇರಲಿದೆ ಎಂದು ಪ್ರದೀಪ್ ವರ್ಮಾ ಹೇಳಿದ್ದಾರೆ.

ನಟ ಅಚ್ಯುತ್ ಕುಮಾರ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ನಿರ್ದೇಶಕ ಪ್ರದೀಪ್ ವರ್ಮಾ, ಅಚ್ಯುತ್ ಕುಮಾರ್ ಅವರ ಅಭಿನಯ ಕಲೆಯನ್ನು ತಮ್ಮ ಊರ್ವಿ ಚಿತ್ರದಲ್ಲಿ ಅವರು  ಸಂಪೂರ್ಣವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರಂತೆ. ಊರ್ವಿ ಚಿತ್ರದ ಅಚ್ಯುತ್ ಕುಮಾರ್ ಅವರ ಪಾತ್ರ ಖಂಡಿತ ತುಂಬಾ ದಿನ ನೆನಪಿನಲ್ಲಿರುತ್ತದೆ ಎಂದು ಪ್ರದೀಪ್ ವರ್ಮಾ ಹೇಳಿದ್ದಾರೆ.  ಅಚ್ಯುತ್ ಕುಮಾರ್ ರನ್ನು ಹೊರತು ಪಡಿಸಿ ನಟಿ ಭವಾನಿ ಪ್ರಕಾಶ್ ಅವರು ಕೂಡ ಖಳ ನಾಯಕಿಯಾಗಿ ಕಾಣಿಸಿಕೊಂಡಿದ್ದಾರಂತೆ. ಊರ್ವಿಯಲ್ಲಿ ಭವಾನಿ ಪ್ರಕಾಶ್ ಅವರ ಪಾತ್ರಕ್ಕೂ ಕೂಡ  ತುಂಬಾ ಮಹತ್ವವಿದೆಯೆಂತೆ.

ಇನ್ನು ಚಿತ್ರದ ಕುರಿತು ಮಾತನಾಡಿದ ಪ್ರದೀಪ್ ವರ್ಮಾ ಚಿತ್ರದ ಎಡಿಟಿಂಗ್ ಕಾರ್ಯ ಬಹುತೇಕ ಮುಕ್ತಾಯವಾಗಿದ್ದು, ಇದೇ ವಾರಾಂತ್ಯದಲ್ಲಿ ಡಬ್ಬಿಂಗ್ ಕಾರ್ಯ ನಡೆಯಲಿದೆ ಎಂದು ಪ್ರದೀಪ್  ವರ್ಮಾ ಮಾಹಿತಿ ನೀಡಿದ್ದಾರೆ.

SCROLL FOR NEXT