ಸ್ಯಾಂಡಲ್ವುಡ್ ನಟರು 
ಸಿನಿಮಾ ಸುದ್ದಿ

ಕೋಟಿಗೊಬ್ಬ 2 ಟೀಸರ್: ಕಿಚ್ಚ ಹೊಸ ಸ್ಟೈಲ್ ಗೆ ಪುನೀತ್, ರಮೇಶ್ ಮೆಚ್ಚುಗೆ

ಸ್ಯಾಂಡಲ್ವುಡ್ ನ ಕಿಚ್ಚ ಸುದೀಪ್ ಮತ್ತು ನಿತ್ಯಾಮೆನನ್ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ 2 ಚಿತ್ರದ ಎರಡನೇ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಒಳ್ಳೆಯ...

ಸ್ಯಾಂಡಲ್ವುಡ್ ನ ಕಿಚ್ಚ ಸುದೀಪ್ ಮತ್ತು ನಿತ್ಯಾಮೆನನ್ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ 2 ಚಿತ್ರದ ಎರಡನೇ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಒಳ್ಳೆಯ ರೆಸ್ಪಾನ್ಸ್ ಪಡೆದಿದೆ.

ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಮೇಶ್ ಅರವಿಂದ್ ಅವರು ಚಿತ್ರದ ಟೀಸರ್ ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಕಿಚ್ಚ ಸುದೀಪ್ ರ ಸ್ಟೈಲಿಷ್ ವಾಕ್ ಅಂಡ್ ಸ್ಟೈಲಿಷ್ ಲುಕ್, ವಿಭಿನ್ನ ಲುಕ್ ಗೆ ಈ ನಟರು ಫೀದಾ ಆಗಿದ್ದು ಚಿತ್ರಕ್ಕಾಗಿ ಕಾಯುತ್ತಿದ್ದಾರೆ ಎಂದು ಚಿತ್ರ ನಿರ್ಮಾಪಕ ಸೂಪರಬಾಬು ಅವರು ಹೇಳಿದ್ದಾರೆ.

ಜುಲೈ 1 ರಂದು ಬಿಡುಗಡೆಯಾಗಿದ್ದ ಕೋಟಿಗೊಬ್ಬ 2 ಟೀಸರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಟೀಸರ್ ಬಿಡುಗಡೆಯಾಗಿದ್ದು, ಕನ್ನಡದ ಟೀಸರ್ ಅನ್ನು ಸುಮಾರು 1 ಲಕ್ಷ ಅಭಿಮಾನಿಗಳು ವೀಕ್ಷಿಸಿದ್ದರೆ, ತಮಿಳು ಆವೃತ್ತಿಯ ಟೀಸರ್ ಅನ್ನು 80 ಸಾವಿರ ಅಭಿಮಾನಿಗಳು ವೀಕ್ಷಿಸಿದ್ದಾರೆ ಎಂದು ಸೂಪರಬಾಬು ಹೇಳಿದ್ದಾರೆ.

ಚಿತ್ರವನ್ನು ತಮಿಳಿನ ಖ್ಯಾತ ನಿರ್ದೇಶಕ ಕೆಎಸ್ ರವಿಕುಮಾರ್ ನಿರ್ದೇಶನ ಮಾಡಿದ್ದು ಕನ್ನಡದಲ್ಲಿ ಕೋಟಿಗೊಬ್ಬ 2 ಶೀರ್ಷಿಕೆಯಲ್ಲಿ ಚಿತ್ರ ತೆರೆಕಂಡರೆ ತಮಿಳಿನಲ್ಲಿ ಮುಡಿಂಜ ಇವನ ಪುಡಿ ಎಂಬ ಹೆಸರಿನಲ್ಲಿ ತೆರೆ ಕಾಣುತ್ತಿದೆ. ಜುಲೈ 9 ರಂದು ಚಿತ್ರದ ಹಾಡುಗಳು ಬಿಡುಗಡೆಯಾಗಲಿದ್ದು ಜುಲೈ ಕೊನೆಯ ವಾರದಲ್ಲಿ ಚಿತ್ರ ತೆರೆಗೆ ತರಲು ನಿರ್ಮಾಪಕ ಸೂರಪ್ಪಬಾಬು ಯೋಜನೆ ಹಾಕಿಕೊಂಡಿದ್ದಾರೆ. ಎರಡು ಭಾಷೆಯ ಚಿತ್ರಗಳು ಜಗತ್ತಿನಾದ್ಯಂತ 1000 ಥಿಯೇಟರ್ ಗಳಲ್ಲಿ ತೆರೆಕಾಣುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT