ಜೀವನದ ಸಿಂಪಲ್ ಅಂಶಗಳನ್ನೇ ಮುಂದಿಟ್ಟುಕೊಂಡು ಹಾಸ್ಯದ ಜತೆ ಅದ್ದೂರಿ ಭೋಜನ ಉಣಬಡಿಸುವ ಸಿಂಪಲ್ ಸುನಿ ಇದೀಗ ಆಪರೇಷನ್ ಅಲಮೇಲಮ್ಮ ಚಿತ್ರ ನಿರ್ದೇಶನಕ್ಕೆ ಇಳಿದಿದ್ದು, ಚಿತ್ರದ ಫಸ್ಟ್ ಲುಕ್ ಬಿಡುಗೆಡೆ ಮಾಡಿದ್ದಾರೆ.
ಆಪರೇಷನ್ ಅಲಮೇಲಮ್ಮ ಚಿತ್ರ ಅಪಹರಣ ಕುರಿತಾದ ಚಿತ್ರಕತೆ ಹೊಂದಿದ್ದು, ಇದಕ್ಕೆ ಹಾಸ್ಯದ ಮೂಲಕ ರೋಚಕತೆಯನ್ನು ಸೃಷ್ಠಿಸಲಿದ್ದಾರೆ. ಈ ಚಿತ್ರದಲ್ಲಿ ಯು ಟರ್ನ್ ಖ್ಯಾತಿಯ ಶ್ರದ್ಧಾ ಶ್ರೀನಾಥ್ ನಟಿಸುತ್ತಿದ್ದು, ಮನೀಶ್ ರಿಶಿ ಈ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ಶಾಲಾ ಶಿಕ್ಷಕಿ ಪಾತ್ರದಲ್ಲಿ ನಟಿಸಲಿದ್ದಾರಂತೆ.
ಚಿತ್ರತಂಡ ಹದಿನೈದು ದಿನಗಳ ಶೂಟಿಂಗ್ ಮುಗಿಸಿದೆ. ಇನ್ನು ಶಾಲೆಯ ಸುತ್ತ ನಡೆಯುವ ಚಿತ್ರೀಕರಣದ ಭಾಗವನ್ನು ಶೂಟ್ ಮಾಡಲಾಗುತ್ತಿದ್ದು, ಆಗಸ್ಟ್ ನಲ್ಲಿ ಒಂದು ಹಾಡಿನ ಚಿತ್ರೀಕರಣ ನಡೆಯಲಿದೆ.
ಅಪರೇಷನ್ ಅಲಮೇಲಮ್ಮ ಚಿತ್ರವನ್ನು ಅಮೆರ್ಜ್ ನಿರ್ಮಾಣ ಮಾಡುತ್ತಿದ್ದು ಇದೇ ಮೊದಲ ಬಾರಿಗೆ ಸುನಿಗೆ ಜತೆಯಾಗಿದ್ದಾರೆ. ಇನ್ನು ಈ ಚಿತ್ರಕ್ಕೆ ನವ ಸಂಗೀತ ನಿರ್ದೇಶಕ ವಸನ್ ಸಂಗೀತ ಸಂಯೋಜಿಸುತ್ತಿದ್ದಾರೆ.