'ಕಲ್ಪನಾ-2' ಸಿನೆಮಾದಲ್ಲಿ ಪ್ರಿಯಾಮಣಿ ಮತ್ತು ಉಪೇಂದ್ರ
ಬೆಂಗಳೂರು: ಉಪೇಂದ್ರ ನಟನೆಯ ಹಾರರ್ ಸಿನೆಮಾ 'ಕಲ್ಪನಾ-2' ನಿರ್ದೇಶಕ ಅನಂತರಾಜು ಈ ಸಿನೆಮಾ ಕೈಗೆತ್ತಿಕೊಳ್ಳುವುದಕ್ಕೆ ತಮಗಿದ್ದ ಸ್ಫೂರ್ತಿಯನ್ನು ಬಿಚ್ಚಿಟ್ಟಿದ್ದಾರೆ. ಉಪೇಂದ್ರ ಅವರಿಗೆ ಈ ಪ್ರಕಾರ ಇಷ್ಟ ಎನ್ನುವ ಅವರು "ಇತ್ತೀಚಿನ ದಿನಗಳಲ್ಲಿ ಹಾರರ್ ವಿಷಯಗಳು ಜನಪ್ರಿಯವಾಗಿವೆ. ನಾನು ಸರಿಯಾದ ಸಮಯದಲ್ಲಿ ಇಲ್ಲಿದ್ದೇನೆ" ಎನ್ನುತ್ತಾರೆ.
ಕೇವಲ ಹಿರೋಯಿಸಂ ಮೇಲೆ ಆವಲಂಬಿತವಾಗದೆ ನಟ ಉಪೇಂದ್ರ ಹಲವಾರು ಪ್ರಾಕಾರಗಳಲ್ಲಿ ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಾರೆ ಎನ್ನುವ ನಿರ್ದೇಶಕ "ಉಪ್ಪಿ ನಟಿಸುತ್ತಾರೆ ಅಲ್ಲದೆ ನಿರ್ದೇಶನದಲ್ಲೂ ಅವರಿಗೆ ಛಾತಿ ಇದೆ. ಅವರಿಂದ ಕಲಿಯುವುದು ಒಂದು ಅವಕಾಶ. ಕಲ್ಪನಾ-2 ನಿರ್ದೇಶಿಸುವುದಕ್ಕೆ ನನಗೆ ಅವಕಾಶ ಸಿಕ್ಕಿದ್ದಕ್ಕೆ ಸಂತಸವಿದೆ" ಎನ್ನುತ್ತಾರೆ ರಾಜು.
ರಾಘವ ಲಾರೆನ್ಸ್ ಅವರ ತಮಿಳು ಸೂಪರ್ ಹಿಟ್ 'ಕಾಂಚನಾ-2' ಸಿನೆಮಾದ ರಿಮೇಕ್ ಇದಾಗಿದ್ದು, ಉಪೇಂದ್ರ ಅವರು ಎರಡು ಅವತಾರಗಳಲ್ಲಿ ಈ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಉಪೇಂದ್ರ ಜೊತೆಗೆ ಈ ಸಿನೆಮಾದಲ್ಲಿ ಪ್ರಿಯಾಮಣಿ ಮತ್ತು ಅವಂತಿಕಾ ಶೆಟ್ಟಿ ನಟಿಸಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ಎಂ ಆರ್ ಸೀನು ಛಾಯಾಗ್ರಹಣ ಮಾಡುತ್ತಿದ್ದಾರೆ.