ಕಾಳಿ ಅವತಾರದಲ್ಲಿ ಶೃತಿ ಹರಿಹರನ್ 
ಸಿನಿಮಾ ಸುದ್ದಿ

ಕಾಳಿ ಅವತಾರದಲ್ಲಿ ಶೃತಿ ಹರಿಹರನ್

ಚೊಚ್ಚಲ ನಿರ್ದೇಶಕ ಪ್ರದೀಪ್ ವರ್ಮಾ ಅವರ ಸಿನೆಮಾ 'ಊರ್ವಿ'ಯಲ್ಲಿ ಕಲಾತ್ಮಕ ನೋಟ ಕಾಣುವಂತಹ ಸ್ಟಿಲ್ ಗಳು ಈಗ ಲಭ್ಯವಾಗಿವೆ. ಶೃತಿ ಹರಿಹರನ್ ಊರ್ವಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಬೆಂಗಳೂರು: ಚೊಚ್ಚಲ ನಿರ್ದೇಶಕ ಪ್ರದೀಪ್ ವರ್ಮಾ ಅವರ ಸಿನೆಮಾ 'ಊರ್ವಿ'ಯಲ್ಲಿ ಕಲಾತ್ಮಕ ನೋಟ ಕಾಣುವಂತಹ ಸ್ಟಿಲ್ ಗಳು ಈಗ ಲಭ್ಯವಾಗಿವೆ. ಶೃತಿ ಹರಿಹರನ್ ಊರ್ವಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 
"ಅವರು ಊರ್ವಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ" ಎನ್ನತ್ತಾರೆ ನಿರ್ದೇಶಕ. ಊರ್ವಿ ಕಾಳಿಯ ಮುಖ, ಶಕ್ತಿಯ ಅವತಾರ ಎನ್ನುತ್ತಾರೆ. 
ಇದು ದೇವಿಯ ಬಗ್ಗೆ ಚಿತ್ರವಲ್ಲ ಆದರೆ ಕಲಾತ್ಮಕವಾಗಿ ರೂಪಕವಾಗಿ ಕಟ್ಟಿಕೊಡಲಾಗಿರುವ ಚಿತ್ರ ಎನ್ನುತ್ತಾರೆ ನಿರ್ದೇಶಕ. ಶೃತಿ ಈ ಅವತಾರದಲ್ಲಿ ಕಾಣಿಸಿಕೊಳ್ಳಲು ಮೂರು ಘಂಟೆಯವರೆಗೆ ಮೇಕ್-ಅಪ್ ನಲ್ಲಿ ತೊಡಗಿಸಿಕೊಳ್ಳಬೇಕಾಯಿತಂತೆ. 
ಊರ್ವಿ ಮುಖದ ತತ್ವದ ಬಗ್ಗೆ ಮಾತನಾಡುವ ನಿರ್ದೇಶಕ ಪ್ರದೀಪ್ "ಊರ್ವಿಯ ಮತ್ತೊಂದು ಹೆಸರು ಕಾಳಿ. 'ಸತ್ಯಕ್ಕೆ' ಮತ್ತೊಂದು ಸಾಂಕೇತಿಕ ಅರ್ಥ. ನಮ್ಮ ಗ್ಯಾಲೆಕ್ಸಿಯಿಂದಾಚೆಗೆ ಸಂಪೂರ್ಣ ಕತ್ತಲೆ" ಎನ್ನುವ ನಿರ್ದೇಶಕ ಈ ಕಟ್ಟಲೆಯಿಂದಲೇ ಕಾಳಿಯ ಬ್ರಹ್ಮಾಂಡ ನೃತ್ಯ ಹೊರಹೊಮ್ಮುವುದು ಎಂದು ವಿವರಿಸುತ್ತಾರೆ. 
"ನಾವು ಆ ತಾಯಿಯ ಗರ್ಭಕೋಶದಲ್ಲಿ ಅಸ್ತಿತ್ವದಲ್ಲಿದ್ದೇವೆ ಮತ್ತು ಅವಳ ನೃತ್ಯದ ಜೊತೆಗೆ ಹೆಜ್ಜೆ ಹಾಕುತ್ತಿದ್ದೇವೆ" ಎಂದು ಕೂಡ ಸೇರಿಸುತ್ತಾರೆ. 
"ಇದು ಕಾಳಿ ಅಥವಾ ಊರ್ವಿಯ ತತತ್ವಶಾಸ್ತ್ರ,. ಆದುದರಿಂದ ಊರ್ವಿಯ ಮುಖ ಹೇಳುವುದೇನೆಂದರೆ ನಾವು ಅವಳ ಒಳಗೆ ಇರುವುದರಿಂದ ಅವಳ ಜೊತೆಗೆ ಸಮರಸದಿಂದರಬೇಕು. ಅವಳಿಗೆ ಬೇಕಾದ್ದನ್ನು ಯಾವಾಗ ಬೇಕಾದರೂ ಎಂದಾದರೂ ಮಾಡಬಹುದು" ಎನ್ನುತ್ತಾರೆ ಪ್ರದೀಪ್. 
ಶೃತಿ ಜೊತೆಗೆ ಶ್ರದ್ಧಾ ಶ್ರೀನಾಥ್ ಮತ್ತು ಶ್ವೇತಾ ಪಂಡಿತ್ ಈ ಸಿನೆಮಾದಲ್ಲಿ ನಟಿಸಿದ್ದು, ಸದ್ಯಕ್ಕೆ ಚಿತ್ರೀಕರಣದ ನಂತರದ ಕೆಲಸಗಳಲ್ಲಿ ಪ್ರದೀಪ್ ನಿರತರಾಗಿದ್ದಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT