ಚೆನ್ನೈ: ಬಿಡುಗಡೆಗೆ ಸಿದ್ಧವಾಗಿರುವ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ಸೋರಿಕೆಯಾಗಿದೆ ಎಂಬ ವದಂತಿಗಳು ಹಬ್ಬಿದೆ. ಆದರೆ ಚಿತ್ರ ತಂಡ ಮಾತ್ರ ಈ ವದಂತಿಗಳನ್ನು ತಳ್ಳಿ ಹಾಕಿದೆ.
ಕಬಾಲಿ ಚಿತ್ರ ಬಿಡುಗಡೆಗೂ ಮುನ್ನವೇ ಆನ್ ಲೈನ್ ನಲ್ಲಿ ಸೋರಿಕೆಯಾಗಿತ್ತು ಎಂಬ ಬಗ್ಗೆ ವರದಿಗಳು ಪ್ರಕಟವಾಗಿದ್ದವು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಕಬಾಲಿ ಚಿತ್ರ ತಂಡ, ಆನ್ ಲೈನ್ ನಲ್ಲಿ ಚಿತ್ರ ಸೋರಿಕೆಯಾಗಿಲ್ಲ ಎಂದು ಹೇಳಿದೆ. "ವರದಿ ಆಧಾರ ರಹಿತ ವದಂತಿಗಳು, ಸೋರಿಕೆಯಾಗಿರುವ ಮಹೈಟಿಯಲ್ಲಿ ಸತ್ಯಾಂಶ ಇಲ್ಲ ಎಂದು ಚಿತ್ರ ನಿರ್ಮಾಪಕ ಕಲೈಪುಲಿ ಹೇಳಿದ್ದಾರೆ. ಚಿತ್ರದ ಸುಮಾರು 30 ನಿಮಿಷಗಳ ದೃಶ್ಯ ಸೋರಿಕೆಯಾಗಿದೆ ಎಂಬ ವರದಿಗಳು ಪ್ರಕಟವಾಗಿದ್ದವು.