ರಜನಿಕಾಂತ್ ಅಭಿನಯದ ಕಬಾಲಿ ಚಿತ್ರದ ಪೋಸ್ಟರ್ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಕಬಾಲಿ ಮೇನಿಯಾ: ಮಧ್ಯರಾತ್ರಿಯಿಂದಲೇ ಪ್ರದರ್ಶನ ಆರಂಭ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ "ಕಬಾಲಿ" ತೆರೆಗೆ ಅಪ್ಪಳಿಸಿದ್ದು, ಮಧ್ಯರಾತ್ರಿಯಿಂದಲೇ ಪ್ರದರ್ಶನ ಆರಂಭವಾಗಿದೆ.

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ "ಕಬಾಲಿ" ತೆರೆಗೆ ಅಪ್ಪಳಿಸಿದ್ದು, ಮಧ್ಯರಾತ್ರಿಯಿಂದಲೇ ಪ್ರದರ್ಶನ ಆರಂಭವಾಗಿದೆ.

ಕಳೆದ ಒಂದು ವಾರದಿಂದಲೇ ಚಿತ್ರ ವೀಕ್ಷಣೆಗಾಗಿ ಕಾತುರರಾಗಿದ್ದ ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ಕ್ಕಿಕ್ಕಿರಿದು ತುಂಬಿ ಚಿತ್ರ ವೀಕ್ಷಣೆ ಮಾಡಿದ್ದಾರೆ. ದೇಶಾದ್ಯಂತ ಏಕಕಾಲದಲ್ಲಿ  ಬಿಡುಗಡೆಯಾಗಿರುವ ಕಬಾಲಿ ಚಿತ್ರ ಸುಮಾರು 4200 ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ತಮಿಳುನಾಡಿನಲ್ಲಿ ಸುಮಾರು 650 ಸ್ಕ್ರೀನ್ ಗಳಲ್ಲಿ ತೆರೆಕಂಡಿರುವ ಕಬಾಲಿ, ಕರ್ನಾಟಕದಲ್ಲಿ 251,  ಆಂಧ್ರ ಪ್ರದೇಶದಲ್ಲಿ 530, ತೆಲಂಗಾಣದಲ್ಲಿ 335, ಕೇರಳದಲ್ಲಿ 308 ಸೇರಿದಂತೆ ಉತ್ತರ ಭಾರತದ ಸುಮಾರು 1, 100 ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.

ಕೇವಲ ಭಾರತ ಮಾತ್ರವಲ್ಲದೇ ಅಮೆರಿಕದ 450 ಚಿತ್ರ ಮಂದಿರಗಳಲ್ಲಿ ಕಬಾಲಿ ಪ್ರದರ್ಶನ ಕಾಣುತ್ತಿದ್ದು, ವಿಶ್ವದ ವಿವಿಧ ದೇಶಗಳ ಒಟ್ಟು 550 ಚಿತ್ರಮಂದಿರಗಳಲ್ಲಿ ಕಬಾಲಿ ತೆರೆಕಾಣುವ ಮೂಲಕ  ಒಟ್ಟು 4200 ಸ್ಕ್ರೀನ್ ಗಳಲ್ಲಿ ಏಕ ಕಾಲದಲ್ಲಿ ತೆರೆಕಂಡಿದೆ. ಟ್ರೇಲರ್ ಮೂಲಕವೇ ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದ್ದ ಈ ಚಿತ್ರದ ರಜನಿ ಎಂಟಿ ಸೀನ್ ಇತ್ತೀಚೆಗೆ ಆನ್ ಲೈನ್ ನಲ್ಲಿ ಲೀಕ್ ಆಗಿತ್ತು.  ಇದೂ ಕೂಡ ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿತ್ತು.

ಇದೀಗ ಚಿತ್ರ ತೆರೆಗೆ ಅಪ್ಪಳಿಸಿದ್ದು, ಕರ್ನಾಟಕವೊಂದರಲ್ಲಿ ಬರೊಬ್ಬರಿ 251ಕ್ಕೂ ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನ ನಟರಾಜ, ವೆಂಕಟೇಶ್ವರ, ಊರ್ವಶಿ ಸೇರಿದಂತೆ ಪ್ರಮುಖ  ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರ ತೆರೆಕಂಡಿದ್ದು, ಕೆಲ ಮಲ್ಟಿಪ್ಲೆಕ್ಸ್ ಗಳಲ್ಲಿ ದಿನವೊಂದಕ್ಕೆ 20 ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಮಧ್ಯರಾತ್ರಿಯಿಂದಲೇ ಶೋ ಆರಂಭವಾಗಿದ್ದು,  ಟಿಕೆಟ್ ಭಾರಿ ಬೇಡಿಕೆ ಎದುರಾಗಿದೆ. 80 ರಿಂದ 150 ಮುಖಬೆಲೆಯ ಟಿಕೆಟ್ ಗಳು 1500 ರು.ದಿಂದ 5000 ರು.ಗಳ ವರೆಗೆ ಬ್ಲಾಕ್ ನಲ್ಲಿ ಮಾರಾಟವಾಗುತ್ತಿದೆ ಎಂದು ತಿಳಿದುಬಂದಿದೆ.

ಕನ್ನಡ ಚಿತ್ರಗಳಿಗೆ ಗೇಟ್ ಪಾಸ್


ಇನ್ನು ರಜನಿಕಾಂತ್ ಅವರ ಕಬಾಲಿ ಚಿತ್ರಕ್ಕೆ ಅನುವು ಮಾಡಿಕೊಡುವ ಸಲುವಾಗಿ ರಾಜ್ಯದ ಬಹುತೇಕ ಮಲ್ಟಿಪ್ಲೆಕ್ಸ್ ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದ ಕನ್ನಡ ಚಿತ್ರಗಳಿಗೆ ಗೇಟ್ ಪಾಸ್  ನೀಡಲಾಗಿದ್ದು, ಆ ಸ್ಕ್ರೀನ್ ಗಳಲ್ಲಿ ಕಬಾಲಿ ಚಿತ್ರ ಪ್ರದರ್ಶನ ಕಾಣುತ್ತಿದೆ. ಇದು ಕನ್ನಡ ಚಿತ್ರ ನಿರ್ದೇಶಕರ ಕೆಂಗಣ್ಣಿಗೆ ಗುರಿಯಾಗಿದ್ದು, ಚಿತ್ರ ಮಂದಿರ ಮತ್ತು ಮಲ್ಟಿಪ್ಲೆಕ್ಸ್ ಗಳ ವಿರುದ್ಧ ಪ್ರತಿಭಟನೆ  ನಡೆಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!