ನಟ ಪುನೀತ್ ರಾಜಕುಮಾರ್ ಜೊತೆಗೆ ಚಂದನ್ ಶೆಟ್ಟಿ ಮತ್ತು ತಂಡ 
ಸಿನಿಮಾ ಸುದ್ದಿ

ಕಿರುತೆರೆ ರಿಯಾಲಿಟಿ ಕಾರ್ಯಕ್ರಮಕ್ಕೆ 'ರ್ಯಾಪ್' ಹಾಡು ಹಾಡಿದ ಪುನೀತ್ ರಾಜಕುಮಾರ್

ನಟನೆಯಷ್ಟೇ ಅಲ್ಲ ಪ್ರತಿಭಾವಂತ ಗಾಯಕ ಎಂದು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪುನೀತ್ ರಾಜಕುಮಾರ್ ಕಿರುತೆರೆಯಲ್ಲಿಯೂ ಮೊದಲ ಬಾರಿಗೆ ಹಾಡೊಂದನ್ನು ಹಾಡಿದ್ದಾರೆ.

ಬೆಂಗಳೂರು: ನಟನೆಯಷ್ಟೇ ಅಲ್ಲ ಪ್ರತಿಭಾವಂತ ಗಾಯಕ ಎಂದು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪುನೀತ್ ರಾಜಕುಮಾರ್ ಕಿರುತೆರೆಯಲ್ಲಿಯೂ ಮೊದಲ ಬಾರಿಗೆ ಹಾಡೊಂದನ್ನು ಹಾಡಿದ್ದಾರೆ. 
ಉದಯ ವಾಹಿನಿಯಲ್ಲಿ ಮೂಡಿ ಬರುತ್ತಿರುವ ನೃತ್ಯ ರಿಯಾಲಿಟಿ ಕಾರ್ಯಕ್ರಮ 'ಕಿಕ್'ಗಾಗಿ ಪುನೀತ್ ಹಾಡೊಂದನ್ನು ಹಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರ ಸಹೋದರ ಶಿವರಾಜ್ ಕುಮಾರ್, ನೃತ್ಯ ನಿರ್ದೇಶಕ ಹರ್ಷ ಮತ್ತು ನಟಿ ರಚಿತಾ ರಾಮ್ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. 
ಪುನೀತ್ ಹಾಡಿರುವ ಈ ರಿಪ್ ಹಾಡನ್ನು ರಚಿಸಿ ಸಂಗೀತ ಸಂಯೋಜಿಸಿರುವುದು ಚಂದನ್ ಶೆಟ್ಟಿ. ಸದ್ಯಕ್ಕೆ ಮೈಸೂರಿನಲ್ಲಿ ಸಂತೋಷ್ ಆನಂದರಾಮ್ ನಿರ್ದೇಶನದ 'ರಾಜಕುಮಾರ' ಚಿತ್ರೀಕರಣದಲ್ಲಿ ನಿರತರಾಗಿರುವ ಪುನೀತ್ ಈ ಹಾಡಿನ ರೆಕಾರ್ಡಿಂಗ್ ಗಾಗಿ ಸಮಯ ಮಾಡಿಕೊಂಡಿದ್ದಾರೆ. 
"ಕೈಕಾಲು ನಿಂತ ಕಡೆ ನಿಲ್ಲೋದಿಲ್ಲ.. ಸ್ಟೆಪ್ ಹಾಕದಿದ್ರೆ ನಮಗೆ ನೆಮ್ಮದಿ ಇಲ್ಲ" ಎಂಬ ಸಾಹಿತ್ಯ ಇರುವ ಈ ಶಕ್ತಿಯುತ ಹಾಡು ಕಾರ್ಯಕ್ರಮದ ಸ್ಪರ್ಧಿಗಳಿಗೆ ಸ್ಫುರ್ತಿ ತುಂಬಲಿದೆ ಎನ್ನುತ್ತಾರೆ ಸಂಗೀತ ನಿರ್ದೇಶಕ. 
ಜುಲೈ 16 ರಿಂದ ಪ್ರಾರಂಭವಾಗಿರುವ ಈ ಕಾರ್ಯಕ್ರಮ ಇಂದಿನ ಶನಿವಾರ ಪ್ರಸಾರವಾಗುವ ಭಾಗದಲ್ಲಿ ಈ ಹಾಡು ಕೇಳಿಬರಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ