'ಸಂತೆಯಲ್ಲಿ ನಿಂತ ಕಬೀರ' ಸಿನೆಮಾದಲ್ಲಿ ಶಿವರಾಜ್ ಕುಮಾರ್
ಬೆಂಗಳೂರು: 100ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿರುವ ಜನಪ್ರಿಯ ನಟ ಶಿವರಾಜ್ ಕುಮಾರ್ ಅವರ ವೈಶಿಷ್ಟ್ಯ ವಾಣಿಜ್ಯ ಸಿನೆಮಾಗಳಿಂದಾಚೆಗೂ ತಮ್ಮನ್ನು ಒಡ್ಡಿಕೊಳ್ಳುವ ಅವರ ಪ್ರಯೋಗಾತ್ಮಕ ಬದ್ಧತೆ.
ಈಗ ಶಿವಣ್ಣ ನಟಿಸಿರುವ 'ಸಂತೆಯಲ್ಲಿ ನಿಂತ ಕಬೀರ' ಶುಕ್ರವಾರ ಬಿಡುಗಡೆಗೆ ಸಿದ್ಧವಾಗಿದ್ದು "ಇದು ವಿಭಿನ್ನ ಸಿನೆಮಾ. ಈ ಪ್ರಾಕಾರದ ಸಿನೆಮಾಗಳು ಇತ್ತೀಚಿಗೆ ವಿರಳ. ಅಪ್ಪಾಜಿ (ರಾಜಕುಮಾರ್) ಅಂತಹ ಸಿನೆಮಾಗಳಲ್ಲಿ ನಟಿಸಿದ್ದರು ಹಾಗು ಅವುಗಳಲ್ಲಿ 'ಭಕ್ತ ಕುಂಬಾರ', 'ಸಂತ ತುಕಾರಾಮ್', 'ಮಹಿಷಾಸುರ ಮರ್ಧಿನಿ' ಮುಂತಾದವು ಭಾರಿ ಯಶಸ್ಸನ್ನು ತಂದುಕೊಟ್ಟವು. ಒಂದು ಸಿನೆಮಾದಲ್ಲಿ ಅವರು ಕಬೀರನಾಗಿಯೂ ನಟಿಸಿದ್ದಾರೆ. ಆದುದರಿಂದ ನಾನು ಈ ಸಿನೆಮಾದಲ್ಲಿ ಪ್ರಯೋಗ ಮಾಡುತ್ತಿದ್ದೇನೆ ಎಂದಷ್ಟೇ ಹೇಳಬಹುದು. ಆದರೆ ಇಂತಹ ಪಾತ್ರಗಳು ನನ್ನ ತಂದೆಯವರೊಂದಿಗೆ ಹೋಲಿಸುವ ಭಯವಂತೂ ಇದ್ದೆ ಇದೆ" ಎನ್ನುತ್ತಾರಷ್ಟೇ ನಟ ಶಿವರಾಜ್ ಕುಮಾರ್.
ಈ ಸಿನೆಮಾದ ಬಗ್ಗೆ ಅಪಾರ ನಿರೀಕ್ಷಿಗಳು ಹುಟ್ಟಿರುವುದನ್ನು ಒಪ್ಪಿಕೊಳ್ಳುವ ನಟ "ವಿವಿಧ ಬಗೆಯ ಸಿನೆಮಾಗಳ ಪ್ರಯೋಗಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಭಯವೇ ಸಹಕಾರಿ. ಈ ಸಿನೆಮಾ ನನಗೆ ಸಿಕ್ಕಿದ್ದಕ್ಕೆ ಖುಷಿಯಿದೆ" ಎನ್ನುತ್ತಾರೆ ಶಿವಣ್ಣ.
14 ನೇ ಶತಮಾನದಲ್ಲಿ ನಡೆದ ಈ ಕಥೆ ಇಂದಿಗೂ ಪ್ರಸ್ತುತ ಎನ್ನುವ ನಟ "ನಾವು 14 ನೇ ಶತಮಾನಕ್ಕೆ ಪ್ರೇಕ್ಷಕರನ್ನು ಕೊಂಡೊಯ್ಯಲು ಪ್ರಯತ್ನಿಸಿದ್ದೇವೆ" ಎನ್ನುವ ಶಿವರಾಜ್ ಕುಮಾರ್ ಇಂತಹ ಸಿನೆಮಾಗಳನ್ನು ನಿರ್ಮಿಸಲು ಮುಂದಾದ ನಿರ್ಮಾಪಕ ಕುಮಾರಸ್ವಾಮಿ ಪಥಿಕೊಂಡ ಅವರನ್ನು ಪ್ರಶಂಸಿಸುತ್ತಾರೆ.
'ಕಬ್ಬಡಿ' ಸಿನೆಮಾ ಖ್ಯಾತಿಯ ಇಂದ್ರಬಾಬು ಈ ಸಿನೆಮಾದ ನಿರ್ದೇಶಕ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics