ನಟ-ನಿರ್ದೇಶಕ ರವಿಚಂದ್ರನ್ 
ಸಿನಿಮಾ ಸುದ್ದಿ

'ಅಪೂರ್ವ' ಒಳ್ಳೆಯ ಸಿನೆಮಾ ಇಲ್ಲದಿರಬಹುದು, ಕೆಟ್ಟ ಸಿನೆಮಾ ಅಂತೂ ಅಲ್ಲ: ರವಿಚಂದ್ರನ್

ರವಿಚಂದ್ರನ್ ನಟಿಸಿ ನಿರ್ದೇಶಿಸಿರುವ ಇತ್ತೀಚಿನ ಚಿತ್ರ 'ಅಪೂರ್ವ'ದ ಮೊದಲ ೨೦ ನಿಮಿಷಕ್ಕೆ ಕತ್ತರಿ ಹಾಕಿ ಚಿತ್ರಮಂದಿರಗಳಲ್ಲಿ ಮರುಬಿಡುಗಡೆ ಮಾಡಿದ್ದಾರೆ.

ಬೆಂಗಳೂರು: ರವಿಚಂದ್ರನ್ ನಟಿಸಿ ನಿರ್ದೇಶಿಸಿರುವ ಇತ್ತೀಚಿನ ಚಿತ್ರ 'ಅಪೂರ್ವ'ದ ಮೊದಲ ೨೦ ನಿಮಿಷಕ್ಕೆ ಕತ್ತರಿ ಹಾಕಿ ಚಿತ್ರಮಂದಿರಗಳಲ್ಲಿ ಮರುಬಿಡುಗಡೆ ಮಾಡಿದ್ದಾರೆ.

ಮಿಶ್ರ ಪ್ರತಿಕ್ರಿಯೆಗಳಿಗೆ ಸಿದ್ಧರಿದ್ದ ನಟ-ನಿರ್ದೇಶಕ, ಸಿನೆಮಾದ ಎರಡು ಆವೃತ್ತಿಗಳನ್ನು ಮೊದಲೇ ಸಿದ್ಧಪಡಿಸಿಕೊಂಡಿದ್ದರಂತೆ. "ಮಲ್ಟಿಪ್ಲೆಕ್ಸ್ ಪ್ರೇಕ್ಷಕರಿಗೆ ಮೊದಲ ಆವೃತ್ತಿ ಹಾಗೂ ಬಿ ಮತ್ತು ಸಿ ಕೇಂದ್ರಗಳಲ್ಲಿ ದ್ವಿತೀಯ ಆವೃತ್ತಿ ಬಿಡುಗಡೆ ಮಾಡಲು ಮೊದಲು ಯೋಜಿಸಿದ್ದೆ" ಎನ್ನುತ್ತಾರೆ ರವಿಚಂದ್ರನ್.  

ನನಗೆ ಮಾಮೂಲಿ ನಿರೀಕ್ಷೆಗಳನ್ನು ತಣಿಸುವ ಉತ್ಸಾಹ ಇರಲಿಲ್ಲ ಎನ್ನುವ ಅವರು "ಈ ಸಿನೆಮಾ ಕೂಡಲೇ ಹಿಟ್ ಆಗುವ ಭರವಸೆ ಇರಲಿಲ್ಲ. 'ಅಪೂರ್ವ' ಪ್ರಯೋಗಾತ್ಮಕ ಸಿನೆಮಾ ಎಂಬ ನನ್ನ ಹೇಳಿಕೆಗೆ ಈಗಲೂ ಬದ್ಧ. ನಾನು ಒಳ್ಳೆ ಸಿನೆಮಾ ಮಾಡಿಲ್ಲದೆ ಇರಬಹುದು ಆದರೆ ಇದು ಕೆಟ್ಟ ಸಿನೆಮಾ ಅಂತೂ ಅಲ್ಲ. 'ಏಕಾಂಗಿ' ಮಾಡಿದ್ದಕ್ಕೆ ವಿಷಾದವಿದೆ; 'ಅಪೂರ್ವ' ಗೆ ಅಲ್ಲ" ಎನ್ನುತ್ತಾರೆ ರವಿಚಂದ್ರನ್.

೩೩ ವರ್ಷಗಳ ದೀರ್ಘ ಕಾಲದವರೆಗೆ ಸಿನೆಮಾರಂಗದಲ್ಲಿ ತೊಡಗಿಸಿಕೊಂಡಿರುವ ರವಿಚಂದ್ರನ್ "ಸಿನೆಮಾ ನನಗೆ ಜೀವನ ನೀಡಿದೆ. ನಾನು 'ಮಲ್ಲ' ರೀತಿಯ ಸಿನೆಮಾಗಳನ್ನು ಮಾಡಬಹುದಿತ್ತು ಆದರೆ ಆ ರೀತಿಯ ಸಿನೆಮಾಗಳಿಂದ ದೂರ ಬರಲು ನಿಶ್ಚಯಿಸಿದೆ" ಎನ್ನುತ್ತಾರೆ.

ಇತರರ ಅಭಿಪ್ರಾಯಗಳಿಂದ ಪ್ರಭಾವಕ್ಕೆ ಒಳಗಾಗದಂತೆ ಪ್ರೇಕ್ಷಕರಿಗೆ ಮೊರೆ ಇಡುವ ರವಿಚಂದ್ರನ್ "ನಾನು ಸಿನೆಮಾ ನಿರ್ದೇಶಿಸಿಲ್ಲ, ಆದರೆ ವಿನ್ಯಾಸ ಮಾಡಿದ್ದೇನೆ. ಪ್ರತಿ ಫ್ರೇಮ್ ಗಾಗಿ ನಾನು ತೆಗೆದುಕೊಂಡಿರುವ ಕಷ್ಟ ಎಲ್ಲರಿಗೂ ತಿಳಿಯುತ್ತದೆ ಎಂಬ ಆತ್ಮವಿಶ್ವಾಸ ಇದೆ" ಎನ್ನುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT