ನಿರ್ದೇಶಕ ಪವನ್ ಒಡೆಯರ್ 
ಸಿನಿಮಾ ಸುದ್ದಿ

'ಬಪ್ಪರ' ಅಥವಾ ದೀರ್ಘ ವಿರಾಮ: ಪವನ್ ಒಡೆಯರ್

'ನಟರಾಜ ಸರ್ವಿಸ್' ಸಿನೆಮಾದ ಚಿತ್ರೀಕರಣ ಮುಗಿಸಿರುವ ನಿರ್ದೇಶಕ ಪವನ್ ಒಡೆಯರ್ ಡಬ್ಬಿಂಗ್ ಮತ್ತಿತರ ಚಿತ್ರೀಕರಣ ನಂತರದ ಕಾರ್ಯಗಳಲ್ಲಿ ನಿರತರಾಗಿದ್ದಾರೆ.

ಬೆಂಗಳೂರು: 'ನಟರಾಜ ಸರ್ವಿಸ್' ಸಿನೆಮಾದ ಚಿತ್ರೀಕರಣ ಮುಗಿಸಿರುವ ನಿರ್ದೇಶಕ ಪವನ್ ಒಡೆಯರ್ ಡಬ್ಬಿಂಗ್ ಮತ್ತಿತರ ಚಿತ್ರೀಕರಣ ನಂತರದ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಶರಣ್ ಮತ್ತು ಮಯೂರಿ ನಟಿಸಿರುವ ಈ ಸಿನೆಮಾವನ್ನು ಜುಲೈನಲ್ಲಿ ಬಿಡುಗಡೆ ಮಾಡುವ ಇರಾದೆಯಲ್ಲಿರುವ ಪವನ್ "ಜೂನ್ ಅಂತ್ಯಕ್ಕೆ ವಿಶಿಷ್ಟವಾದ ಆಡಿಯೋ ಬಿಡುಗಡೆ ಹಮ್ಮಿಕೊಂಡು ಜುಲೈ ನಲ್ಲಿ ಸಿನೆಮಾ ಬಿಡುಗಡೆ ಮಾಡುವ ಯೋಜನೆಯಿದೆ" ಎನ್ನುತ್ತಾರೆ.

ಅಲ್ಲದೆ ರಮೇಶ್ ಅರವಿಂದ್ ಅವರ ೧೦೦ನೇ ಕನ್ನಡ ಚಿತ್ರ 'ಪುಷ್ಪಕ ವಿಮಾನ' ಸಿನೆಮಾಗೂ ಒಂದಷ್ಟು ಸಮಯವನ್ನು ಹೊಂದಿಸಿಕೊಳ್ಳಲಿರುವ ಪವನ್ "'ಪುಷ್ಪಕ ವಿಮಾನ' ನಿರ್ಮಾಣದಲ್ಲಿ ವಿಕ್ಯಾತ್ ಪಿಕ್ಚರ್ಸ್ ಜೊತೆಗೆ ಒಡೆಯರ್ ಫಿಲ್ಮ್ ಫ್ಯಾಕ್ಟರಿ ಕೂಡ ಭಾಗವಾಗಿದೆ. ಇದು ರಮೇಶ್ ಅವರ ೧೦೦ನೇ ಚಿತ್ರವಾಗಿರುವುದರಿಂದ ಈ ಚಿತ್ರದ ಪ್ರಚಾರ ಸರಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕಿದೆ" ಎನ್ನುತಾರೆ.

ಅವರ ಮುಂದಿನ ಯೋಜನೆ ಬಗ್ಗೆ ಹೇಳುವ ಪವನ್ "ಪುನೀತ್ ರಾಜಕುಮಾರ್ ಅವರ ಜೊತೆಗೆ 'ಬಪ್ಪರ' ಮಾಡುತ್ತೇನೆ ಅಥವಾ ದೀರ್ಘ ವಿರಾಮ ಎನ್ನುತ್ತಾರೆ. 'ಬಪ್ಪರ' ಸ್ಕ್ರಿಪ್ಟ್ ಮೇಲೆ ಕೆಲಸ ನಡೆಯುತ್ತಿದೆ. ಪುನೀತ್ ಅವರು ಸದ್ಯದ ಸಿನೆಮಾಗಳನ್ನು ಮುಗಿಸುವವರೆಗೂ ನಾನು ಕಾಯಬೇಕು. ಅವರು ಯಾವಾಗ ಪ್ರಾರಂಭಿಸಬೇಕು ಎಂಬುದನ್ನು ನಟನ ಜೊತೆ ಇನ್ನೂ ಚರ್ಚಿಸಬೇಕಿದೆ. ನನ್ನ ತಿಳುವಳಿಕೆ ಪ್ರಕಾರ ಅವರ 'ರಾಜಕುಮಾರ' ಸಿನೆಮಾದ ನಂತರ ಇದು ಸಾಧ್ಯ" ಎನ್ನುತ್ತಾರೆ.

"ಪುನೀತ್ ಜೊತೆಗೆ ನನ್ನ ಈ ಯೋಜನೆ ತಡವಾದರೆ ಅಲ್ಲಿಯವರೆಗೂ ಕಾಯುತ್ತೇನೆ. ನಾಲ್ಕು ವರ್ಷಗಳಲ್ಲಿ ೬ ಸಿನೆಮಾಗಳನ್ನು ಮಾಡಿದ್ದೇನೆ. ಈಗ ಏನು ಮಾಡಬೇಕೆಂಬ ಸ್ಪಷ್ಟತೆಯಿದೆ. ನಡುವ ಬೇರೆ ಯೋಜನೆ ಕೈಗೆತ್ತಿಕೊಳ್ಳುವ ಪ್ರಶ್ನೆಯೇ ಇಲ್ಲ" ಎನ್ನುತ್ತಾರೆ ನಿರ್ದೇಶಕ ಪವನ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

SCROLL FOR NEXT