ಧ್ರುವ ಸರ್ಜಾ 
ಸಿನಿಮಾ ಸುದ್ದಿ

ರಿಮೇಕ್ ಚಿತ್ರಗಳಲ್ಲಿ ನಟಿಸದಿರಲು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದೇನೆ: ಧ್ರುವ ಸರ್ಜಾ

ಚೇತನ್ ಕುಮಾರ್ ನಿರ್ದೇಶನದ 'ಭರ್ಜರಿ' ಸಿನೆಮಾಗಾಗಿ ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿರುವ ನಟ ಧ್ರುವ ಸರ್ಜಾ ಅಲ್ಲಿನ ಪ್ರದೇಶಕ್ಕೆ ಒಗ್ಗಿಕೊಂಡಿದ್ದಾರಂತೆ.

ಬೆಂಗಳೂರು: ಚೇತನ್ ಕುಮಾರ್ ನಿರ್ದೇಶನದ 'ಭರ್ಜರಿ' ಸಿನೆಮಾಗಾಗಿ ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿರುವ ನಟ ಧ್ರುವ ಸರ್ಜಾ ಅಲ್ಲಿನ ಪ್ರದೇಶಕ್ಕೆ ಒಗ್ಗಿಕೊಂಡಿದ್ದಾರಂತೆ.

ಸೇನೆಯ ಜೆರ್ಸಿ ತೊಟ್ಟು, ಎಡಗೈ ತೋಳಿನ ಮೇಲೆ 'ಸೈನಿಕ' ಎಂಬ ಅಚ್ಚೆ ಹಾಕಿಸಿಕೊಂಡು ತಲೆಯ ಸುತ್ತ ಟವೆಲ್ ಕಟ್ಟಿಕೊಂಡು ಕಾಣಿಸಿಕೊಂಡಿರುವ ಧ್ರುವ "ಈ ಸಿನೆಮಾದಲ್ಲಿ ನನ್ನದೇ ಸ್ಟೈಲ್ ಸೃಷ್ಟಿಸಿದ್ದೇನೆ. ಸಿನೆಮಾ ಬಿಡುಗಡೆಯಾದ ಮೇಲೆ ಜನರಿಗೆ ಅದು ತಿಳಿಯಲಿದೆ" ಎನ್ನುತ್ತಾರೆ.

ಸಿನೆಮಾದ ಎರಡನೆ ಹಂತದ ಚಿತ್ರೀಕರಣದಲ್ಲಿರುವ ತಂಡ ಸದ್ಯಕ್ಕೆ ಉತ್ತರ ಕರ್ನಾಟಕ ಪ್ರದೇಶದಲ್ಲಿ ಚಿತ್ರೀಕರಣ ನಡೆಸಿದೆ "ಉಳಿದ ಚಿತ್ರೀಕರಣ ನಡೆಸಲು ಹುಬ್ಬಳ್ಳಿಯತ್ತ ತೆರಳಲಿದ್ದೇವೆ, ನಂತರ ಆಕ್ಷನ್ ದೃಶ್ಯಕ್ಕೂ ಸಜ್ಜಾಗುತ್ತಿದ್ದೇನೆ" ಎನ್ನುವ ಧ್ರುವ ಈ ತಿಂಗಳ ಕೊನೆಗೆ ಚಿತ್ರೀಕರಣ ಮುಕ್ತಾಯವಾಗುವ ಭರವಸೆ ವ್ಯಕ್ತಪಡಿಸುತ್ತಾರೆ.

ತಮ್ಮ ವೃತ್ತಿಜೀವನದಲ್ಲಿ ನಿಧಾನಕ್ಕೆ ಹೆಜ್ಜೆ ಇಡುತ್ತಿರುವ ಧ್ರುವ "ಇದ್ಯಾವುದೂ ಬೇಕಂತಲೇ ಮಾಡುತ್ತಿರುವುದಲ್ಲ ಆದರೆ ಅತ್ಯುತ್ತಮವಾದದ್ದನ್ನು ಮಾಡುವ ಹಂಬಲ. ನಾನು ಪ್ರತಿ ಬಾರಿ ಸಾರ್ವಜನಿಕರನ್ನು ಭೇಟಿಯಾದಾಗ ಅವರು ನನ್ನ ಸಿನೆಮಾಗಳ ಬಗ್ಗೆ ಕೇಳಿ ಹರಸುತ್ತಾರೆ. ನನಗೆ ಅವರೆಡೆಗೆ ಜವಾಬ್ದಾರಿ ಇರುವಂತೆ ಭಾಸವಾಗುತ್ತದೆ. ಒಳ್ಳೆಯ ಸಿನೆಮಾವನ್ನು ಮಾಡುವೆ ಉದ್ವೇಗ ನನ್ನನ್ನು ನಿಧಾನಿಸಿದೆ. ಯಾರಿಗೂ ಸುಳ್ಳು ಭರವಸೆ ನೀಡಲು ನನಗೆ ಇಷ್ಟವಿಲ್ಲ. ಇಲ್ಲಿಯವರೆಗೂ ಸಿನೆಮಾ ಮೂಡಿ ಬಂದಿರುವ ರೀತಿಗೆ ಖುಷಿಯಿದೆ" ಎನ್ನುತಾರೆ.

ಭರ್ಜರಿ ನಂತರ ನಂದಕಿಶೋರ್ ನಿರ್ದೇಶನದ ಸಿನೆಮಾದಲ್ಲಿ ನಟಿಸಲಿರುವ ಧ್ರುವ "ಬಹಳ ಹಿಂದೆ ನಿರ್ಮಾಪಕ ಗಂಗಾಧರ್ ಅವರೊಂದಿಗೆ ಸಹಿ ಮಾಡಿದ ಸಿನೆಮಾ ಇದು. ನಾನು ಮೊದಲೆ ಹೇಳಿದಂತೆ ಇದು ರಿಮೇಕ್ ಸಿನೆಮಾ ಅಲ್ಲ. ನಾನು ರಿಮೇಕ್ ಚಿತ್ರಗಳಲ್ಲಿ ನಟಿಸದಿರಲು ಆದಷ್ಟು ಪ್ರಯತ್ನಿಸುತ್ತಿದ್ದೇನೆ. ಆದುದರಿಂದ ಸ್ವಲ್ಪ ತಡವಾಗುತ್ತಿದೆ" ಎನ್ನುತ್ತಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಸ್ಟಿಂಗ್‌ ಆಪರೇಷನ್‌ ಬಗ್ಗೆ ಬೇರೆಯವರು ಮಾತನಾಡುವ ಆಗಿಲ್ಲ ಎನ್ನಲು ನೀವೇನು ಸರ್ವಾಧಿಕಾರಿಯೇ ಪ್ರಿಯಾಂಕ್‌ ಖರ್ಗೆ..?

1 ವರ್ಷ ಗ್ಯಾರಂಟಿ ಯೋಜನೆಗಳ ನಿಲ್ಲಿಸಿ, ಹಣವನ್ನು ರೈತರಿಗೆ ನೀಡಿ: ರಾಜ್ಯ ಸರ್ಕಾರಕ್ಕೆ ದಿಂಗಾಲೇಶ್ವರ ಶ್ರೀಗಳ ಆಗ್ರಹ

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ 18 ನಿಮಿಷದಲ್ಲಿ ಜೀವಂತ ಹೃದಯ ಸಾಗಾಟ!