ಸಿನಿಮಾ ಸುದ್ದಿ

ನಿಹಲಾನಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ ನಿರ್ದೇಶಕರ ಸಂಘ

Guruprasad Narayana

ಮುಂಬೈ: 'ಉಡ್ತಾ ಪಂಜಾಬ್' ಸಿನೆಮಾ ಮೂಲಕ ಪಂಜಾಬ್ ಅನ್ನು ಕೆಟ್ಟ ರೀತಿಯಲ್ಲಿ ಚಿತ್ರಿಸಲು ಸಿನೆಮಾದ ಸಹನಿರ್ಮಾಪಕ ಅನುರಾಗ್ ಕಶ್ಯಪ್ ಎಎಪಿ ಪಕ್ಷದಿಂದ ಹಣ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿರುವ ಸೆನ್ಸಾರ್ ಮಂಡಲಿ ಅಧ್ಯಕ್ಷ ಪಹ್ಲಜ್ ನಿಹಲಾನಿ ಕ್ಷಮೆ ಕೇಳಬೇಕೆಂದು ಭಾರತೀಯ ಸಿನೆಮಾ ಮತ್ತು ಟೆಲಿವಿಶನ್ ನಿರ್ದೇಶಕರ ಸಂಘ ಆಗ್ರಹಿಸಿದೆ.

ಅಶೋಕ್ ಪಂಡಿತ್ ನಾಯಕತ್ವ ಸಂಘ ನಿಹಲಾನಿ ಅವರ ಈ ಹೇಳಿಕೆಯನ್ನು ಖಂಡಿಸಿ ಕ್ಷಮೆ ಕೋರುವಂತೆ ಆಗ್ರಹಿಸಿದೆ.

"ನಾವು ಹೇಳಿಕೆಯನ್ನು ಖಂಡಿಸುತ್ತೇವೆ. (ನಿಹಲಾನಿ ನೀಡಿರುವುದು), ಸಾಧ್ಯವಾದಷ್ಟು ಬೇಗ ಅವರು ಕ್ಷಮೆ ಕೇಳಬೇಕು. ಇದು ಕಶ್ಯಪ್ ಅವರಿಗೆ ಮಾಡಿರುವ ನಿಂದನೆಯಷ್ಟೇ ಅಲ್ಲ ಇಡೀ ಸಿನೆಮಾ ರಂಗಕ್ಕೆ ಮಾಡಿರುವ ಅವಮಾನ" ಎಂದು ಸೆನ್ಸಾರ್ ಮಂಡಳಿಯ ಸದಸ್ಯರೂ ಆಗಿರುವ ಪಂಡಿತ್ ಹೇಳಿದ್ದಾರೆ.

ಕಶ್ಯಪ್ ವಿರುದ್ಧ ನಿಹಲಾನಿ ಮಾಡಿರುವ ಆರೋಪಗಳನ್ನು ನೋಡಿದರೆ ಅವರು ಭಾರತೀಯ ಜನತಾ ಪಕ್ಷದ ಆದೇಶದ ಮೇಲೆ ಸಿನೆಮಾ ವಿರುದ್ಧ ಪಿತೂರಿ ಮಾಡಿದ್ದಾರೆ ಎಂದು ತಿಳಿಯುತ್ತದೆ ಎಂದು ದೆಹಲಿ ಮುಖಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ತಿರುಗೇಟು ನೀಡಿದ್ದಾರೆ.

SCROLL FOR NEXT