ಸಾಂದರ್ಭಿಕ ಚಿತ್ರ 
ಸಿನಿಮಾ ಸುದ್ದಿ

ಬಯಲುಸೀಮೆ ಶಾಶ್ವತ ನೀರಾವರಿ ಹೋರಾಟ: ಬೀದಿಗಿಳಿದ ಕನ್ನಡ ಚಿತ್ರೋದ್ಯಮ

ಬಯಲು ಸೀಮೆ ಶಾಶ್ವತ ನೀರಾವರಿ ಜಾರಿಗೆ ಆಗ್ರಹಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಇಂದು ಕೋಲಾರ ಜಿಲ್ಲೆಯಲ್ಲಿ ನಡೆಸುತ್ತಿರುವ ಅನಿರ್ದಿಷ್ಠಾವಧಿ ..

ಕೋಲಾರ:  ಬಯಲು ಸೀಮೆ ಶಾಶ್ವತ ನೀರಾವರಿ ಜಾರಿಗೆ ಆಗ್ರಹಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಇಂದು ಕೋಲಾರ ಜಿಲ್ಲೆಯಲ್ಲಿ ನಡೆಸುತ್ತಿರುವ ಅನಿರ್ದಿಷ್ಠಾವಧಿ ಹೋರಾಟಕ್ಕೆ ಚಿತ್ರರಂಗ ಕೂಡ ಬೆಂಬಲ ಸೂಚಿಸಿದೆ.

ಕನ್ನಡ ಚಿತ್ರರಂಗ ಕೂಡ ಬಯಲುಸೀಮೆ ಜಿಲ್ಲೆಗಳ ನಾಗರಿಕರ ಜತೆ ಕೈಜೋಡಿಸಿದ್ದು,  ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಚಿತ್ರನಟ, ನಟಿಯರು, ತಂತ್ರಜ್ಞರು ಎರಡು ವೋಲ್ವೊ ಬಸ್ ಮೂಲಕ ಬೆಂಗಳೂರಿನಿಂದ ಕೋಲಾರಕ್ಕೆ ತೆರಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಚಿತ್ರರಂಗದ ಗಣ್ಯರು ಕೋಲಾರ ಪ್ರವಾಸಿ ಮಂದಿರದಿಂದ ನಗರದ ಪ್ರಮುಖ ಬೀದಿಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಸರ್ವಜ್ಞ ವೃತ್ತ ಬಳಿ ನಿರ್ಮಾಣಗೊಂಡಿರುವ ಬಹಿರಂಗ ವೇದಿಕೆಯಲ್ಲಿ ಬಹಿರಂಗ ಸಭೆ ನಡೆಸಿದರು.

ನಟ ಶಿವರಾಜ್‌ಕುಮಾರ್ ಜತೆ ಪುನಿತ್ ರಾಜ್‌ಕುಮಾರ್, ಉಪೇಂದ್ರ, ದರ್ಶನ್, ಯಶ್, ದೊಡ್ಡಣ್ಣ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟಿಯರಾದ ಶ್ರುತಿ, ಪೂಜಾಗಾಂಧಿ, ರಾಗಿಣಿ ದ್ವಿವೇದಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಸೇರಿದಂತೆ ಚಿತ್ರೋದ್ಯಮದ ಹಲವು ಗಣ್ಯರು ಭಾಗವಹಿಸಿದ್ದಾರೆ. ಫಿಲಂ ಚೇಂಬರ್ ಸದಸ್ಯರು, ನಿರ್ಮಾಪಕರ ಸಂಘ, ತಂತ್ರಜ್ಞರ ಸಂಘ, ಕಾರ್ಮಿಕರ ಒಕ್ಕೂಟ, ಕಲಾವಿದರ ಸಂಘದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ನಾಡು, ನುಡಿ, ರೈತರ ಸಮಸ್ಯೆಗಳಿಗೆ ಚಿತ್ರರಂಗ ಸದಾ ಸ್ಪಂದಿಸಲಿದೆ. ರೈತರ ನೀರಾವರಿ ಹೋರಾಟಕ್ಕೆ ಕನ್ನಡ ಚಿತ್ರರಂಗದ ಎಲ್ಲಾ ವಿಭಾಗದವರೂ ಬೆಂಬಲಿಸಿದ್ದಾರೆ. ಈ ಹಿಂದೆ ಕಳಸಾ ಬಂಡೂರಿ ನೀರಾವರಿ ಹೋರಾಟವನ್ನು ನಾವು ಬೆಂಬಲಿಸಿದ್ದೆವು. ಇಂತಹ ಹೋರಾಟಗಳಿಗೆ ಮಾಧ್ಯಮಗಳ ಬೆಂಬಲ ಅತ್ಯಗತ್ಯ ಎಂದು ನಟ ಶಿವರಾಜ್‌ಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!