'ಹೆಬ್ಬುಲಿ' ಪ್ರಶ್ನೆಗೆ 'ಯು-ಟರ್ನ್' ಉತ್ತರ; ಟ್ವಿಟ್ಟರ್ ನಲ್ಲಿ ನಡೆದ ಸ್ಟಾರ್ ನಟರ ಬಗ್ಗೆ ಚಿಲಿಪಿಲಿ
ಕನ್ನಡದ ಜನಪ್ರಿಯ ನಟ ಸುದೀಪ್ ಮತ್ತು ಖ್ಯಾತ ಯುವ ನಿರ್ದೇಶಕ ಪವನ್ ಕುಮಾರ್ ಅವರ ಟ್ವಿಟ್ಟರ್ ಪ್ರಶ್ನೋತ್ತರ ಸಾಮಾಜಿಕ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ.
ಬೆಂಗಳೂರು: ಕನ್ನಡದ ಜನಪ್ರಿಯ ನಟ ಸುದೀಪ್ ಮತ್ತು ಖ್ಯಾತ ಯುವ ನಿರ್ದೇಶಕ ಪವನ್ ಕುಮಾರ್ ಅವರ ಟ್ವಿಟ್ಟರ್ ಪ್ರಶ್ನೋತ್ತರ ಸಾಮಾಜಿಕ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ.
'ಹೆಬ್ಬುಲಿ' ಚಿತ್ರದ ನಟ ಸುದೀಪ್, ಪವನ್ ಕುಮಾರ್ ನಿರ್ದೇಶನದ 'ಯು-ಟರ್ನ್' ಸಿನೆಮಾದ ಬಗ್ಗೆ ಮಾತನಾಡಿ, "ಅತಿ ಒಳ್ಳೆಯ ಚಿತ್ರ ಎಲ್ಲರೂ ಅತ್ಯುತ್ತಮವಾಗಿ ನಟಿಸಿದ್ದಾರೆ ಆದರೆ ಕೆಲವು ದಿನಗಳ ಹಿಂದೆ ನೀವು ಬರೆದದ್ದನ್ನು ಓದಿದ್ದೆ. ನೀವು ಸ್ಟಾರ್ ನಟರ ಜೊತೆಗೆ ಕೆಲಸ ಮಾಡುವುದಿಲ್ಲ ಎಂದಿದ್ದಿರಿ. ಪವನ್ ಕುಮಾರ್ ಅವರಿಗೆ ನನ್ನ ಪ್ರಶ್ನೆ, ಈ ಸ್ಟಾರ್ ನಟರೆಲ್ಲಾ ಯಾರ್ಯಾರು?" ಎಂದು ಕೇಳಿ ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಭಾನುವಾರ ತೇಲಿಬಿಟ್ಟಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.