ಮುಂಬೈ: ಸಲ್ಮಾನ್ ಖಾನ್ ಜೊತೆಗೆ ಅಂತಹ ಒಳ್ಳೆಯ ಸಂಬಂಧಗಳು ಇಲ್ಲ ಎಂಬ ಗಾಳಿಸುದ್ದಿಗಳ ನಡುವೆಯೇ ನಟ ವಿವೇಕ್ ಓಬಿರಾಯ್ ಸಲ್ಮಾನ್ ನಟನೆಯ 'ಸುಲ್ತಾನ್' ಚಿತ್ರ ಅದ್ಭುತ ಎಂದಿದ್ದಾರೆ.
ನಾಗೇಶ್ ಕುಕುನೂರ್ ಅವರ 'ಧನಕ್' ಸಿನೆಮಾದ ಪ್ರದರ್ಶನದ ವೇಳೆಯಲ್ಲಿ ಶಾರುಕ್ ಖಾನ್ ಅವರ 'ರಯೀಸ್' ಮತ್ತು ಸಲ್ಮಾನ್ ಅವರ 'ಸುಲ್ತಾನ್' ಸಿನೆಮಾಗಳ ಬಗ್ಗೆ ಅಭಿಪ್ರಾಯವೇನು ಎಂಬ ಪ್ರಶ್ನೆಗೆ, 'ಸುಲ್ತಾನ್' ಸಿನೆಮಾದ ಬಗ್ಗೆ ಪ್ರತಿಕ್ರಿಯಿಸಿ "ಸಿನೆಮಾ ಅದ್ಭುತವಾಗಿದೆ. ಈ ಅತ್ಯುತ್ತಮ ನಟರು ಬಯೋಪಿಕ್ ಗಳಲ್ಲಿ ಇಂತಹ ಪಾತ್ರಗಳ ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಿರುವುದನ್ನು ನೋಡುವುದೇ ಚಂದ" ಎಂದಿದ್ದಾರೆ.
ವಿವೇಕ್ ಸದ್ಯಕ್ಕೆ ರಿತೇಶ್ ದೇಶಮುಖ್ ಮತ್ತು ರಿಯಾ ಚಕ್ರವರ್ತಿ ಅವರ ಜೊತೆಗೆ 'ಬ್ಯಾಂಕ್ಚೋರ್' ಸಿನೆಮಾದಲ್ಲಿ ನಟಿಸಿದ್ದಾರೆ.
ಅವರ ಮುಂದಿನ ಸಿನೆಮಾ 'ಗ್ರೇಟ್ ಗ್ರ್ಯಾಂಡ್ ಮಸ್ತಿ'.