ತಮಿಳು ಮತ್ತು ತೆಲುಗಿಗೆ ಡಬ್ ಆಗಲಿರುವ 'ಜೆಸ್ಸಿ'
ಪವನ್ ಒಡೆಯರ್ ನಿರ್ದೇಶನದ 'ಜೆಸ್ಸಿ' ಈ ತಿಂಗಳು ಬಿಡುಗಡೆಗೆ ಸಿದ್ಧವಾಗುತ್ತಿದೆ. ಧನಂಜಯ್ ಮತ್ತು ಪರುಲ್ ಯಾದವ್ ನಟಿಸಿರುವ ಈ ಚಿತ್ರದ ಆಡಿಯೋ ಈಗಾಗಲೇ ಜನಪ್ರಿಯವಾಗಿದ್ದು,
ಬೆಂಗಳೂರು: ಪವನ್ ಒಡೆಯರ್ ನಿರ್ದೇಶನದ 'ಜೆಸ್ಸಿ' ಈ ತಿಂಗಳು ಬಿಡುಗಡೆಗೆ ಸಿದ್ಧವಾಗುತ್ತಿದೆ. ಧನಂಜಯ್ ಮತ್ತು ಪರುಲ್ ಯಾದವ್ ನಟಿಸಿರುವ ಈ ಚಿತ್ರದ ಆಡಿಯೋ ಈಗಾಗಲೇ ಜನಪ್ರಿಯವಾಗಿದ್ದು, ಆರ್ ಎಸ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರ ತೆಲುಗು ಮತ್ತು ತಮಿಳು ಭಾಷೆಗಳಿಗೆ ಡಬ್ ಆಗಲಿದೆ ಎನ್ನುತ್ತಾರೆ ನಿರ್ದೇಶಕ. ಆದರೆ ಕನ್ನಡ ಚಿತ್ರದ ಬಿಡುಗಡೆಯ ಎರಡು ವಾರಗಳ ನಂತರ ಆ ಎರಡು ಭಾಷೆಗಳಲ್ಲಿ ಸಿನೆಮಾ ಬಿಡುಗಡೆಯಾಗಲಿದೆಯಂತೆ.
"ನಾನು ಪೋತುಗಡು (ಗೋವಿಂದಾಯನಮಃದ ರಿಮೇಕ್) ತೆಲುಗಿನಲ್ಲಿ ನಿರ್ದೇಶಿಸಿದ ಮೇಲೆ ಅಲ್ಲಿನ ಜನ ನನ್ನ ಮುಂದಿನ ಯೋಜನೆಯ ಬಗ್ಗೆ ಕೇಳುತ್ತಿದ್ದರು. ಇದು ವಿಶಿಷ್ಟವಾದ ಕಥೆ ಮತ್ತು ಎಲ್ಲ ಕಡೆಯೂ ಸಲ್ಲುವಂತದ್ದು ಅಲ್ಲದೆ ಧನಂಜಯ್, ಪರುಲ್ ಯಾದವ್ ಮತ್ತು ರಘು ಮುಖರ್ಜಿ ತರಹದ ತಾಜಾ ಮುಖಗಳಿವೆ. ಸದ್ಯಕ್ಕೆ ಶಬ್ದ ತಂತ್ರಜ್ಞ ರಾಮಕೃಷ್ಣ ಚೆನ್ನೈನಲ್ಲಿದ್ದು ಡಬ್ಬಿಂಗ್ ಕಾರ್ಯದಲ್ಲಿ ನಿರತರಾಗಿದ್ದಾರೆ" ಎನ್ನುತ್ತಾರೆ ನಿರ್ದೇಶಕ ಪವನ್.
"ನನಗೆ ಇನ್ನು ಕೇವಲ ೧೫ ದಿನಗಳಷ್ಟೇ ಉಳಿದಿದೆ ಈ ತಿಂಗಳ ಕೊನೆಗೆ ಸಿನೆಮಾ ಬಿಡುಗಡೆ ಮಾಡಲು" ಎನ್ನುತಾರೆ ಪವನ್.
ಅನೂಪ್ ಸೀಳೀನ್ ಸಿನೆಮಾಗೆ ಸಂಗೀತ ನೀಡಿದ್ದು, ಸೋಮಸುಂದರಂ ಸಿನೆಮ್ಯಾಟೋಗ್ರಾಫರ್.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.