ಬೆಂಗಳೂರು: ಖ್ಯಾತ ನಟರಾದ ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೆ ನಟಿಸಲಿರುವ ಪ್ರೇಮ್ ನಿರ್ದೇಶನದ 'ಕಲಿ' ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದ್ದು ಇಂದಿನಿಂದ ನಿರ್ಮಾಣ ಕಾರ್ಯಗಳು ಪ್ರಾರಂಭವಾಗಲಿವೆ.
ಇತ್ತೀಚೆಗಷ್ಟೇ ಮಂತ್ರಾಲಯದ ದೇವಾಲಯಕ್ಕೆ ಹೋಗಿ ನಿರ್ದೇಶಕ ಪೂಜೆ ಸಲ್ಲಿಸಿದ್ದಾರಂತೆ. ಮತ್ತು ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಈ ಸಿನೆಮಾಗ ಆರು ಜನ ಸಂಗೀತ ನಿರ್ದೇಶಕರು ಸಂಗೀತ ನೀಡಲಿದ್ದು, ಹಂಸಲೇಖ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಮೊದಲ ಹಾಡಿನ ರೆಕಾರ್ಡಿಂಗ್ ಕೆಲಸಗಳು ಪ್ರಾರಂಭವಾಗಲಿವೆಯಂತೆ .
"ಹಂಸಲೇಖ ಚಿತ್ರತಂಡದ ಭಾಗವಾಗಿರುವುದು, ಕನಸು ನನಸಾದಂತೆ. ನಾನು ಇಂದು ಅಲ್ಪ ಸ್ವಲ್ಪ ಸಂಗೀತದ ಕಲಿತಿರುವುದಾದರೆ, ಅದು ಹಂಸಲೇಖ ಅವರ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳನ್ನು ಕೇಳಿಯೇ. 'ಕಲಿ'ಗೆ ಮುಂಚಿತವಾಗಿಯೂ ಹಲವಾರು ಬಾರಿ ಅವರನ್ನು ಕೇಳಿಕೊಂಡಿದ್ದೆ ಆದರೆ ಯಶಸ್ವಿಯಾಗಿರಲಿಲ್ಲ. ಇಂದಿನ ಪೀಳಿಗೆಗೆ ಟ್ಯೂನ್ ಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ಅವರು ನಿರಾಕರಿಸಿದ್ದರು. ಈ ಬಾರಿ ಅವರನ್ನು ೧೫ ನಿಮಿಷಗಳವರೆಗೆ ಭೇಟಿ ಮಾಡಿ ಒಪ್ಪಿಸಿದೆ" ಎನ್ನುತಾರೆ ಪ್ರೇಮ್.
"ಅವರು ಸಿನೆಮಾದ ಪರಿಚಯಾತ್ಮಕ ಹಾಡಿಗೆ ಸಂಗೀತ ನೀಡಲಿದ್ದು, ಆ ಹಾಡಿನಿಂದಲೇ ಸಿನೆಮಾ ಪ್ರಾರಂಭವಾಗಲಿದೆ. ನನಗೆ ಎಲ್ಲ ಸಂಗೀತ ನಿರ್ದೇಶಕರು ಗೆಳೆಯರೇ ಆದರೆ ಹಂಸಲೇಖ ಅವರ ರೀತಿಯಲ್ಲಿ ಯಾರಿಗೂ ಹಾಡುಗಳನ್ನು ನೀಡಲು ಸಾಧ್ಯವಿಲ್ಲ. ಈಗ 'ಕಲಿ' ಇತಿಹಾಸವಾಗಿರುವುದರಿಂದ ಅದಕ್ಕೆ ಹಂಸಲೇಖ ಸರಿಯಾಗಿ ಹೊಂದಿಕೊಳ್ಳುತ್ತಾರೆ" ಎನ್ನುತ್ತಾರೆ ನಿರ್ದೇಶಕ.
ಹಂಸಲೇಖ ಅವರು ಸಂಗೀತ ನೀಡಿರುವ ಹಾಡು ಲಂಡನ್ನಿನಲ್ಲಿ ಮಿಕ್ಸ್ ಆಗಲಿದೆಯಂತೆ, ಅದಕ್ಕಾಗಿ ೩೦೦ ಜನ ಸಂಗೀತಕಾರರು ಆರ್ಕೆಸ್ಟ್ರಾದಲ್ಲಿ ಪಾಲ್ಗೊಳ್ಳಲಿದ್ದು, ಕನ್ನಡ ಸಿನೆಮಾದಲ್ಲಿ ಇದು ಮೊದಲು ಎನ್ನಿತ್ತಾರೆ ಪ್ರೇಮ್.
"ನೋಟ್ಸ್ ಕಂಪೋಸ್ ಮಾಡಿದ ಮೇಲೆ ನಾನು ಮತ್ತು ಹಂಸಲೇಖ ಲಂಡನ್ ಗೆ ತೆರಳಲಿದ್ದೇವೆ. ಅಂತರಾಷ್ಟ್ರೀಯ ಗುಣಮಟ್ಟದ ಸಂಗೀತ ಹೊರತರಬೇಕೆಂಬುದು ನನ್ನ ಆಸೆ" ಎನ್ನುತ್ತಾರೆ ಅವರು.
ಹಂಸಲೇಖ ಅಲ್ಲದೆ, ಸಾಧು ಕೋಕಿಲಾ, ಗುರುಕಿರಣ್. ವಿ ಹರಿಕೃಷ್ಣ, ಅರ್ಜುನ್ ಜನ್ಯ ಮತ್ತು ಅನೂಪ್ ಸೀಳಿನ್ ಸಿನೆಮಾಗೆ ಸಂಗೀತ ನೀಡಲಿದ್ದಾರೆ.