'ಯು ಟರ್ನ್' ಸಿನೆಮಾದಲ್ಲಿ ಶ್ರದ್ಧಾ ಶ್ರೀನಾಥ್ 
ಸಿನಿಮಾ ಸುದ್ದಿ

ಲ್ಯೂಸಿಡ್ ಕನಸುಗಳಿಂದ ಸಾಮಾಜಿಕ ಕಳಕಳಿಯತ್ತ 'ಯು ಟರ್ನ್'

'ಲೂಸಿಯಾ' ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ತಮ್ಮ ಮುಂದಿನ ಚಿತ್ರ 'ಯು ಟರ್ನ್' ಚಿತ್ರೀಕರಣ ಮುಗಿಸಿ ಬೇಸಿಗೆ ರಜಕ್ಕೆ ಬಿಡುಗಡೆಗೆ ಮಾಡಲು ಸಜಾಗುತ್ತಿದ್ದಾರೆ.

ಬೆಂಗಳೂರು: 'ಲೂಸಿಯಾ' ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ತಮ್ಮ ಮುಂದಿನ ಚಿತ್ರ 'ಯು ಟರ್ನ್' ಚಿತ್ರೀಕರಣ ಮುಗಿಸಿ ಬೇಸಿಗೆ ರಜಕ್ಕೆ ಬಿಡುಗಡೆಗೆ ಮಾಡಲು ಸಜಾಗುತ್ತಿದ್ದಾರೆ.

ಇದು ನಿರ್ದೇಶಕನ ಮೂರನೇ ಚಿತ್ರವಾಗಿದ್ದು, ಚಿತ್ರೀಕರಣದ ನಂತರದ ಕೆಲಸಗಳ ಕೊನೆಯ ಹಂತದಲ್ಲಿದ್ದಾರೆ. ಶೀಘ್ರದಲ್ಲೇ ಸೆನ್ಸಾರ್ ಮಂಡಲಿಗೆ ಕೂಡ ಕಳುಹಿಸಲಿದ್ದಾರಂತೆ. "ಸಾಧ್ಯವಾದರೆ ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆ ಮಾಡುತ್ತೇವೆ" ಎನ್ನುತ್ತಾರೆ 'ಲೈಫು ಇಷ್ಟೇನೆ' ಸಿನೆಮಾದ ನಿರ್ದೇಶಕ.

ಜನರ ಹೂಡಿಕೆಯಿಂದ ನಿರ್ಮಾಣ ಮತ್ತು ವಿತರಣೆಗೊಂಡ ಸಿನೆಮಾ ಎಂದು ಅಪಾರ ಮನ್ನಣೆ ಗಳಿಸಿದ 'ಲೂಸಿಯಾ' ಸಿನೆಮಾದ ಅಭಿಮಾನಿಗಳು 'ಯು ಟರ್ನ್' ಗಾಗಿ ಕುತೂಹಲದಿಂದ ಕಾಯುತ್ತಿದ್ದಾರಂತೆ.

"ವಿಷಯ ಮತ್ತು ಚಿತ್ರೀಕರಣದ ರೀತಿಯಲ್ಲಿ 'ಯು ಟರ್ನ್' ವಿಶಿಷ್ಟ ಸಿನೆಮಾ ಆದರೆ 'ಲೂಸಿಯಾ'ಗಿಂತ ಸರಳವಾದದ್ದು. ನೇರ ನಿರೂಪಣೆಯುಳ್ಳ ಈ ಸಿನೆಮಾ ಜನರನ್ನು ಸುಲಭಾವಗಿ ತಲುಪುತ್ತದೆ" ಎನ್ನುತ್ತಾರೆ ನಿರ್ದೇಶಕ.

'ಯು ಟರ್ನ್' ಮೂಲಕ ಸಂದೇಶ ಕೂಡ ನೀಡುವುದಾಗಿ ಹೇಳುವ ನಿರ್ದೇಶಕ "ಸಾಮಾಜಿಕ ಕಳಕಳಿಯ ಸಿನೆಮಾ ಮಾಡಬೇಕೆಂದುಕೊಂಡಿದ್ದೆ. 'ಯು ಟರ್ನ್' ವಾಹನ ದಟ್ಟಣೆಗೆ ಸಂಬಧಿಸಿದ್ದು. ಇದು ಪ್ರೇಕ್ಷಕರಿಗೆ ಅರಿವು ಮೂಡಿಸುವಂತಾದ್ದು. ಮನರಂಜನೆ-ಥ್ರಿಲ್ ಎಲ್ಲವೂ ಇದ್ದೂ, ಸುರಕ್ಷಿತ ವಾಹನ ಚಾಲನೆಯ ವಿಷಯವನ್ನು ಒಳಗೊಂಡಿದೆ" ಎಂದು ವಿವರಿಸುತ್ತಾರೆ ಪವನ್.

ಈ ಸಿನೆಮಾದಲ್ಲಿ ಕೇವಲ ಒಂದು ಹಾಡಷ್ಟೇ ಇದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ಒದಗಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

19 ವರ್ಷಗಳ ಹಳೆಯ ದಾಖಲೆ ಉಡೀಸ್: ಅಭಿಷೇಕ್, ಪಾಂಡ್ಯ ಅಬ್ಬರ; ಜಿಂಬಾಬ್ವೆಗೆ 257 ರನ್‌ ಬೃಹತ್ ಮೊತ್ತದ ಗುರಿ ನೀಡಿದ ಭಾರತ!

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT