3D ಮತ್ತು ಐಮ್ಯಾಕ್ ಆವೃತ್ತಿಗಳಲ್ಲಿ ಇಂಗ್ಲಿಶ್ ಭಾಷೆಯಲ್ಲಿ 'ರಾಮಾಯಣ' ಚಿತ್ರ
ಟಿ ವಿ ಧಾರಾವಾಹಿಗಳು, ಸಿನೆಮಾಗಳು, ಕಾರ್ಟೂನ್ ಮತ್ತು ಅನಿಮೇಶನ್ ಗಳ ಮೂಲಕ ಈಗಾಗಲೇ ರಾಮಾಯಣವನ್ನು ಹಲವು ಬಾರಿ ಹೇಳಲಾಗಿದ್ದರೂ, ಮೂರು ಯುವ ನಿರ್ದೇಶಕರು
ಮುಂಬೈ: ಟಿ ವಿ ಧಾರಾವಾಹಿಗಳು, ಸಿನೆಮಾಗಳು, ಕಾರ್ಟೂನ್ ಮತ್ತು ಅನಿಮೇಶನ್ ಗಳ ಮೂಲಕ ಈಗಾಗಲೇ ರಾಮಾಯಣವನ್ನು ಹಲವು ಬಾರಿ ಹೇಳಲಾಗಿದ್ದರೂ, ಮೂರು ಯುವ ನಿರ್ದೇಶಕರು ಜಾಗತಿಕ ಪ್ರೇಕ್ಷಕರಿಗಾಗಿ ಇಂಗ್ಲಿಶ್ ಅವತರಿಣೆಕೆಹನ್ನು ಹೊರತರಲು ಸಜ್ಜಾಗಿದ್ದಾರೆ.
ಅಮೆರಿಕಾದ ನಿರ್ದೇಶಕರಾದ ವಿನೀತ್ ಸಿನ್ಹ, ಸೀನ್ ಗ್ರಹಾಮ್ ಹಾಗು ಕಲಾತ್ಮಕ ನಿರ್ದೇಶಕ ರೊನ್ನಿ ಅಲ್ಲ್ಮಾನ್ ಈ ಪುರಾಣ ಕಥೆ 'ರಾಮಾಯಣ'ವನ್ನು ವಿಶ್ವ ಪ್ರೇಕ್ಷಕರಿಗೆ ಎಂಗ್ಲಿಶ್ ನಲ್ಲಿ ಮರು ಸೃಷ್ಟಿಸಲಿದ್ದಾರಂತೆ.
ಇಂದಿನ ತಂತ್ರಜ್ಞಾನದ ಗುಣಮಟ್ಟವನ್ನು ಬಳಸಿಕೊಂಡು 'ಲಾರ್ಡ್ ಆಫ್ ದ ರಿಂಗ್ಸ್' ಮತ್ತು 'ಪ್ಲ್ಯಾನೆಟ್ ಆಫ್ ದ ಏಪ್ಸ್' ಗುಣಮಟ್ಟದ ಸಿನೆಮಾ ನಿರ್ಮಿಸಲಿದ್ದೇವೆ ಎನ್ನುತ್ತದೆ ಚಿತ್ರತಂಡ.
"ಬ್ಯಾಟ್ ಮ್ಯಾನ್, ಸೂಪರ್ ಮ್ಯಾನ್, ಸ್ಟಾರ್ ವಾರ್ಸ್, ಪೋಕಿ ಮ್ಯಾನ್ ಇವೆಲ್ಲವೂ ಹಾಲಿವುಡ್, ಚೈನಾ, ಜಪಾನ್ ನಲ್ಲಿ ನೋಡಲಾಗುತ್ತದೆ. ಆದರೆ ಭಾರತೀಯ ಕಥೆಗಳು ತಿಳಿದಿಲ್ಲ" ಎನ್ನುತ್ತಾರೆ ವಿನೀತ್.
3D ಮತ್ತು ಇಮ್ಯಾಕ್ಸ್ ನಲ್ಲಿ 'ರಾಮಾಯಣ' ಕಥೆ ಹೇಳಬೇಕೆಂದಿದ್ದೇವೆ ಎನ್ನುತ್ತಾರೆ ನಿರ್ದೇಶಕ ಸೀನ್ ಗ್ರಹಾಮ್.
ರಾವಣ ಪಾತ್ರವನ್ನು ಮೆಚ್ಚುವ ಸೀನ್ "ರಾವಣ ಅತಿ ಬುದ್ಧಿವಂತ, ತರ್ಕವಾದಿ, ಸೃಜನಶೀಲ, ಅನುಕಂಪ ಇರುವವನು ಆದರೆ ಶಿಸ್ತಿನ ಹಾಸ್ಯವಿಲ್ಲದ ರಾಜ, ಅವನ ೧೦ ತಲೆಗಳು ನಮ್ಮೆಲ್ಲರ ವಿವಿಧ ಗುಣಗಳ ಪ್ರನಿಧಿಗಳಂತೆ" ಎಂದು ಸೀನ್ ವಿವರಿಸುತ್ತಾರೆ.