3ನೇ ವಾರದ ಅಂತ್ಯದಲ್ಲೂ ಜಂಗಲ್ ಬುಕ್ ಬಾಕ್ಸ್ ಆಫೀಸ್ ಕಲೆಕ್ಷನ್ ಜೋರು
ಡಿಸ್ನಿಯ ‘ದಿ ಜಂಗಲ್ ಬುಕ್’ ಉತ್ತರ ಅಮೆರಿಕದ ಬಾಕ್ಸ್ ಆಫೀಸ್ನಲ್ಲಿ ಭಾರಿ ಸದ್ದು ಮಾಡುತ್ತಿದೆ. ...
ಲಾಸ್ಏಂಜಲಿಸ್: ಡಿಸ್ನಿಯ ‘ದಿ ಜಂಗಲ್ ಬುಕ್’ ಉತ್ತರ ಅಮೆರಿಕದ ಬಾಕ್ಸ್ ಆಫೀಸ್ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ಉತ್ತರ ಅಮೆರಿಕ ವೊಂದರಲ್ಲಿಯೇ ಮೂರನೇ ವಾರದ ಅಂತ್ಯದಲ್ಲಿ ನಿರೀಕ್ಷೆಯಂತೆ 42.2 ಮಿಲಿಯನ್ ಗೂ ಜಾಸ್ತಿ ಆದಾಯ ತಂದು ದಾಖಲೆ ನಿರ್ಮಿಸುವತ್ತ ಹೆಜ್ಜೆ ಇಟ್ಟಿದೆ.
ವಿಶ್ವಾದ್ಯಂತ ಬರೋಬ್ಬರಿ 4500 ಕೋಟಿಗೂ ಜಾಸ್ತಿ ಆದಾಯ ತಂದುಕೊಟ್ಟಿದೆ. ಕಳೆದೊಂದು ವಾರಕ್ಕಿಂತ ಶೇಕಡಾ 31ರಷ್ಟು ಆದಾಯದಲ್ಲಿ ಹೆಚ್ಚಳ ಆಗಿದ್ದರೂ, ಆರೋಗ್ಯಕರ ಬೆಳವಣಿಗೆ ಎನ್ನಲಾಗುತ್ತಿದೆ. ಕಳೆದ 10 ದಿನಗಳಲ್ಲಿನ ಈ ಚಿತ್ರದ ಒಟ್ಟಾರೆ ಆದಾಯ 34 ಮಿಲಿಯನ್ ಡಾಲರ್ ( 225.67 ಕೋಟಿ ರೂ) ಎಂದು ಹೇಳಲಾಗಿದೆ.
ಉಳಿದಂತೆ ಈ ವಾರಾಂತ್ಯದಲ್ಲಿ ಬಾಕ್ಸ್ ಆಫೀಸ್ನ ಹಿಟ್ ಚಿತ್ರ ಎನಿಸಿಕೊಂಡಿದ್ದು ‘ದಿ ಹಂಟ್ಸ್ಮನ್: ವಿಂಟರ್ಸ್ ವಾರ್’. ಹೆಚ್ಚೂ ಕಡಿಮೆ 9.4 ಮಿಲಿಯನ್ ಡಾಲರ್ ಹಣ ಗಳಿಕೆಯೊಂದಿಗೆ ಎರಡನೇ ಸ್ಥಾನ ಗಳಿಸಿಕೊಂಡಿದೆ. 3ನೇ ಸ್ಥಾನದಲ್ಲಿ ಕೀನು ಚಿತ್ರವಿದೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.