ಸಿನಿಮಾ ಸುದ್ದಿ

ಸಾಮಾಜಿಕ ಕಟ್ಟುಪಾಡಿನ ನಡುವೆ ಅಪೇಕ್ಷೆಯ ಅನ್ವೇಷಣೆಯಲ್ಲಿ ನಾಗತಿಹಳ್ಳಿ 'ಇಷ್ಟಕಾಮ್ಯ'

Guruprasad Narayana

ಬೆಂಗಳೂರು: 'ಅಮೆರಿಕಾ ಅಮೆರಿಕಾ', 'ಹೂಮಳೆ', 'ಅಮೃತಧಾರೆ' ಇಂತಹ ಸಿನೆಮಾಗಳ ಮೂಲಕ ಕನ್ನಡ ಸಿನೆಮಾ ರಸಿಕರ ಮನೆಮಾತಾಗಿರುವ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಈಗ 'ಇಷ್ಟಕಾಮ್ಯ'ದ ಮೂಲಕ ಮತ್ತೆ ಪ್ರತ್ಯಕ್ಷವಾಗಿದ್ದಾರೆ. ಕಾದಂಬರಿಯೊಂದನ್ನು ದೃಶ್ಯರೂಪಕ್ಕೆ ತಂದಿರುವ ನಿರ್ದೇಶಕ "ಲೇಖಕರ ಕಥೆಯನ್ನು ಸಿನೆಮಾ ಕಥೆಯನ್ನಾಗಿ ಅಡವಳಿಸುವುದಕ್ಕೆ ನನಗೆ ಹೆಚ್ಚಿನ ಖುಷಿ ಸಿಗುತ್ತದೆ ಮತ್ತು ಇಂದು ಒಂದು ರೀತಿ ದೊಡ್ಡ ಸವಾಲು" ಎನ್ನುತ್ತಾರೆ.

ನಿರ್ದೇಶಕರನ್ನು ಎರಡು ಬಗೆಯಾಗಿ ವಿಂಗಡಿಸುವ ನಾಗತಿಹಳ್ಳಿ "ಪ್ರತಿ ಮೂಲವನ್ನು ಹುಡುಕುತ್ತಾ, ತಮ್ಮ ಸಂಶೋಧನೆಯನ್ನು ಖಚಿತಪಡಿಸಿಕೊಳ್ಳಲು ಶ್ರಮ ವಹಿಸುವ ನಿರ್ದೇಶಕರು ಒಂದು ಕಡೆಗಿದ್ದರೆ, ಇತರ ಭಾಷೆಗಳ ಸಿನೆಮಾಗಳಿಂದ ಸ್ಫೂರ್ತಿಗೊಂಡು ಅವುಗಳನ್ನು ಇಲ್ಲಿನ ನೆಲಕ್ಕೆ ಅಳವಡಿಸಿಕೊಳ್ಳುವ ನಿರ್ದೇಶಕರು ಇನ್ನೊಂದು ಕಡೆ. ಎರಡನೆಯದು ವಾಣಿಜ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ಇದು ಕಡಿಮೆ ಶ್ರಮ ಬೇಡುವ ಕೆಲಸ" ಎನ್ನುತ್ತಾರೆ.

ತಮಗೆ ಸಿನೆಮಾ ಮಾಡುವುದಕ್ಕೆ ಹೆಚ್ಚಿನ ಸಮಯ ಹಿಡಿಯುವುದೇಕೆ ಎಂಬುದಕ್ಕೆ ಕಾರಣ ನೀಡುವ ನಾಗತಿಹಳ್ಳಿ "ದಂತಕತೆಗಳಿಂದ ಹೊರಬಂದು, ಇತಿಹಾಸವನ್ನು ಅರಿಯುವುದುದಕ್ಕೆ ಸಾಕಷ್ಟು ತಾಳ್ಮೆಯ ಅಗತ್ಯವಿದೆ. ಕನ್ನಡ ಚಿತ್ರರಂಗ ಇಂದು ಈ ದಾರಿ ತುಳಿದಿಲ್ಲ. ಇಂದು ಎಲ್ಲರೂ ಮೂರು ತಿಂಗಳಲ್ಲಿ ಕಥೆ ಸಿದ್ಧವಿರಬೇಕೆಂದು ನಿರೀಕ್ಷಿಸುತ್ತಾರೆ. ಆದರೆ ನಾನು ಆ ವಿಭಾಗಕ್ಕೆ ಸೇರಿದವನಲ್ಲ ಆದುದರಿಂದ ನನ್ನ ಕೆಲಸ ತುಸು ನಿಧಾನವಾಗಿರುತ್ತದೆ" ಎಂದು 'ಇಷ್ಟಕಾಮ್ಯ' ಪುಸ್ತಕವನ್ನು ಎಂದೋ ಓದಿದ್ದ ನಿರ್ದೇಶಕ ವಿವರಿಸುತ್ತಾರೆ.

"ನಾನು ಇದನ್ನು ದೊಡ್ಡ ತೆರೆಗೆ ತರಲು ನಿರ್ಧರಿಸಿದಾಗ, ಕ್ಯಾಮರಾ ಮುಂದೆ ಇದನ್ನು ತರುವ ಸವಾಲುಗಳನ್ನು ಪರಿಗಣಿಸಬೇಕಿತ್ತು ಅಲ್ಲದೆ ಪುಸ್ತಕದಲ್ಲಿದ್ದಂತೆಯೇ ಕಥೆ ನಿರೂಪಿಸುವುದು ಕಷ್ಟ ಮತ್ತು ಇಂದಿನ ಪೀಳಿಗೆಗೆ ತಕ್ಕಂತೆ ಅದನ್ನು ಬದಲಾಯಿಸಬೇಕಿತ್ತು. ಅದಕ್ಕಾಗಿ ಹೆಚ್ಚಿನ ಸಮಯ ಬೇಕಿತ್ತು. ಹೊಸ ಸಿನೆಮಾವೊಂದನ್ನು ಸೃಷ್ಟಿಸುವಾಗ ಮೂಡುವ ಒತ್ತಡ, ಕಳವಳ, ವ್ಯಾಕುಲತೆ ಎಲ್ಲವನ್ನು ಸಂತಸದಿಂದ ಸ್ವೀಕರಿಸಿದ್ದೇನೆ" ಎನ್ನುತ್ತಾರೆ ನಿರ್ದೇಶಕ.

ಪ್ರೇಕ್ಷಕರ ಬಗ್ಗೆ ಇರುವ ಗೌರವವೇ ಅವರಿಗೆ ಪ್ರತಿ ಬಾರಿ ತಾಜಾ ಕಥೆಯ ಹುಡುಕುವುದಕ್ಕೆ ಪ್ರೇರಣೆ ನೀಡುತ್ತದಂತೆ "ಕೆಲವು ಬಾರಿ ನಾನು ಸೋತಿರಬಹುದು ಆದರೆ ಅಸಭ್ಯ ಗೆಲುವಿಗಿಂತ ಗಾಂಭೀರ್ಯವಾದ ಸೋಲೇ ಮೇಲು. ಸಾಹಿತ್ಯದ ವಿದ್ಯಾರ್ಥಿಯಾಗಿ, ಸಾಹಿತ್ಯ ಕೃತಿಗಳಿಂದ ಗಾಂಭೀರ್ಯ ಮೂಡುತ್ತದೆ ಎಂದು ನಂಬಿದ್ದೇನೆ. ಆದರೆ ಸಾಹಿತ್ಯ ಕೃತಿಯನ್ನು ಆಧರಿಸದ 'ಅಮೆರಿಕಾ ಅಮೆರಿಕಾ', 'ಅಮೃತಧಾರೆ'ಯಂತಹ ಸಿನೆಮಾಗಳನ್ನು ಕೂಡ ಮಾಡಿದ್ದೇನೆ. ನಾನು ಸಾಹಿತ್ಯ ವಿಷಯಗಳಿಗೆ ಅಂಟಿ ಕೂರುವುದಿಲ್ಲ ಕೂಡ" ಎಂದು ಕೂಡ ಎಂದು ವಿವರಿಸುತ್ತಾರೆ.

ಸಿನೆಮಾ ಮತ್ತಿ ಶೀರ್ಷಿಕೆಯ ಬಗ್ಗೆ ವಿವರಿಸುವ ನಿರ್ದೇಶಕ, ಇಂದಿನ ಪ್ರೇಕ್ಷಕರು ಜಾಣರು ಮತ್ತು ಅವರಿಗೆ ಕಷ್ಟದ ಶೀರ್ಷಿಕೆಗಳು ಅರ್ಥವಾಗುತ್ತವೆ ಎನ್ನುವ ಅವರು "ನನಗೆ ಸರಳ ಶೀರ್ಷಿಕೆ ಬಳಸಲು ಇಷ್ಟವಿಲ್ಲ ಏಕೆಂದರೆ ಪ್ರೇಕ್ಷರನ್ನು ಯೋಚನೆಗೆ ಹಚ್ಚುವುದಕ್ಕೆ ನನಗಿಷ್ಟ. 'ಇಷ್ಟಕಾಮ್ಯ ಸಿದ್ಧಿರಸ್ತು' ಎಂಬುದು ಸಂಸ್ಕೃತ ನುಡಿಗಟ್ಟು. ಕನ್ನಡದಲ್ಲಿ ಇದರರ್ಥ
ವ್ಯಕ್ತಿಗಳ ಒಳ ಆಸೆಗಳು ಮತ್ತು ಗುರಿಗಳು ಸಿದ್ಧಿಸಲಿ ಎಂದು. ಸಿನೆಮಾದಲ್ಲಿನ ಮೂರು ಮುಖ್ಯ ಪಾತ್ರಗಳು ಸಾಮಾಜಿಕ ಕಟ್ಟುಪಾಡುಗಳ ನಡುವೆ ಅವರದ್ದೇ ಸ್ವಂತ ಅಪೇಕ್ಷೆ-ಬಯಕೆಗಳನ್ನು ಹೊಂದಿರುತ್ತಾರೆ. ಈ ಅಪೇಕ್ಷೆಗಳು ಅವರಿಗೆ ಕೂಡಿ ಬರುತ್ತವೆಯೇ ಎಂಬುದೇ ಸಿನೆಮಾದ ಕೇಂದ್ರ ಕಥೆ. ಇದು ಸಾಮಾನ್ಯ ಪ್ರೇಮಕಥೆಯಲ್ಲಿ, ಮದುವೆ ಎಂಬ ಸಾಂಪ್ರದಾಯಿಕ ಸಂಸ್ಥೆಯ ಬಗೆಗೂ ಪ್ರಶ್ನಿಸುತ್ತದೆ. ಕೇವಲ ಮನರಂಜನೆಗಷ್ಟೇ ನಾನಿಲ್ಲಿರುವುದಲ್ಲ, ಪ್ರಶ್ನೆಗಳನ್ನು ಎತ್ತಲು ಕೂಡ" ಎನ್ನುತ್ತಾರೆ.

ವಿಜಯ್ ಸೂರಿಯಾ, ಮಯೂರಿ ಮತ್ತು ಕಾವ್ಯ ಮುಖ್ಯಭೂಮಿಕೆಯಲ್ಲಿರುವ ಸಿನೆಮಾದಲ್ಲಿ "ಇದನ್ನು ವಾಣಿಜ್ಯಾತ್ಮಕ ದೃಷ್ಟಿಯಿಂದಲೂ ಚಿತ್ರಿಸಿದ್ದೇನೆ. ಅದ್ಭುತ ತಾಣಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಒಳ್ಳೆಯ ೫ ಹಾಡುಗಳಿವೆ ಮತ್ತು ಮೊದಲ ಬಾರಿಗೆ ನಾನು ಕೂಡ ಹಿನ್ನಲೆ ಗಾಯಕನಾಗಿ ಹೊರಹೊಮ್ಮಿದ್ದೇನೆ" ಎಂದು ವಿವರಿಸುತ್ತಾರೆ.

ರಂಗಾಯಣ ರಘು, ಪ್ರಕಾಶ್ ಬೆಳವಾಡಿ, ಚಿಕ್ಕಣ್ಣ, ಮಂಡ್ಯ ರಮೇಶ್ ಕೂಡ ಸಿನೆಮಾದಲ್ಲಿ ನಟಿಸಿದ್ದು ಅಜನೀಶ್ ಬಿ ಲೋಕನಾಥ್ ಸಂಗೀತ ನೀಡಿದ್ದಾರೆ ಮತ್ತು ರವಿ ಕುಮಾರ್ ಸಾನ ಸಿನೆಮ್ಯಾಟೋಗ್ರಫರ್. ನಾಗತಿಹಳ್ಳಿ ನಡೆಸುವ ಸ್ಕೂಲ್ ಟೆಂಟ್ ಸಿನೆಮಾದ ೧೦ ಜನ ವಿದ್ಯಾರ್ಥಿಗಳನ್ನು ಈ ಸಿನೆಮಾದ ತಂತ್ರಜ್ಞರಾಗಿ ಬಳಸಿಕೊಂಡಿರುವುದು ವಿಶೇಷ!  

SCROLL FOR NEXT