ಸಿನಿಮಾ ಸುದ್ದಿ

'ಕರೆಂಟ್ ತೀಗ' ನಂತರ ಮತ್ತೆ ತೆಲುಗು ಸಿನಿಮಾದಲ್ಲಿ ಸನ್ನಿ ಲಿಯೋನ್ ಅಭಿನಯ?

Shilpa D

ಹೈದರಾಬಾದ್: ಬಾಲಿವುಡ್ ನಟಿ ಸನ್ನಿ ಲಿಯೋನ್ ತೆಲಗು ಚಿತ್ರದಲ್ಲಿ ನಟಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕೆಲ ಮೂಲಗಳ ಪ್ರಕಾರ ಸನ್ನಿ ಲಿಯೋನ್ ತೆಲಗು ಫಿಲ್ಮಂ ಇಂಡಸ್ಟ್ರಿಗೆ ಎಂಟ್ರಿ ನೀಡಲಿದ್ದಾರಂತೆ.. ತೆಲಗು ಚಿತ್ರದಲ್ಲಿ ಸನ್ನಿಲಿಯೋನ್  ಪ್ರಮುಖ ಪಾತ್ರ ನಿರ್ವಹಿಸಲಿದ್ದಾಳೆ ಎನ್ನಲಾಗಿದೆ.

ಸಂಜೀವ್ ಕುಮಾರ್ ನಿರ್ಮಿಸುತ್ತಿರುವ  ಬುರ್ರ ಕಥಾ ಚಿತ್ರದಲ್ಲಿ ಸನ್ನಿ ಅಭಿನಯಿಸಲಿದ್ದು ಈ ತಿಂಗಳ ಅಂತ್ಯದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೋಳ್ಳಲಿದ್ದಾರೆ.

ಈಗಾಗ್ಲೇ ಸನ್ನಿ ಲಿಯೋನ್ 2014 ರಲ್ಲಿ ತೆರೆಕಂಡ ಕರೆಂಟ್ ತೀಗ ಎಂಬ ತೆಲಗು ಚಿತ್ರದಲ್ಲಿ ನಟಿಸಿದ್ದಾರೆ.  ಈ ಹಿಂದೆ ಸನ್ನಿ 2014 ರಲ್ಲಿ ವಡಾಕರಿ ಎಂಬ ತಮಿಳು ಚಿತ್ರದಲ್ಲಿ ನಟಿಸಿದ್ದರು .ಮತ್ತೊಮ್ಮೆ ಸನ್ನಿ ಲಿಯೋನ್ ದಕ್ಷಿಣ ರಾಜ್ಯಗಳ ಚಿತ್ರರಂಗದಲ್ಲಿ ಎಂಟ್ರಿ ನೀಡಿದ್ದು, ಕನ್ನಡದಲ್ಲಿ ಲವ್ ಯು ಆಲಿಯಾ ಮತ್ತು ಡಿಕೆ ಚಿತ್ರಗಳ ಐಟಂ ಸಾಂಗ್ ಗೆ ಹೆಜ್ಜೆ ಹಾಕಿದ್ದಾರೆ.


SCROLL FOR NEXT