ಚಾಮರಾಜನಗರ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರುಗಳನ್ನು ಅರಣ್ಯಾಧಿಕಾರಿಗಳು ತಡೆದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಗೇಟ್ ನಲ್ಲಿ ನಡೆದಿದೆ.
ಅಯ್ಯಪ್ಪಮಾಲೆ ಧರಿಸಿ ಶಬರಿಮಲೆಗೆ ಹೊರಟಿದ್ದ ದರ್ಶನ್ ಮತ್ತು ಸ್ನೇಹಿತರಿಬ್ಬರ ಕಾರುಗಳಿಗೆ ಗೋಪಾಲಸ್ವಾಮಿ ಬೆಟ್ಟದೊಳಗೆ ಹೋಗಲು ಅರಣ್ಯ ಇಲಾಖೆ ಅಧಿಕಾರಿಗಳು ನಿರಾಕರಿಸಿದರು. ಹುಲಿ ಸಂರಕ್ಷಿತ ಪ್ರದೇಶವಾದುದರಿಂದ ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ, ಬೇಕಿದ್ದರೆ ಅರಣ್ಯ ಇಲಾಖೆಯ ವಾಹನದಲ್ಲಿ ಬೆಟ್ಟಕ್ಕೆ ಹೋಗಿ ಎಂದು ಅಧಿಕಾರಿಗಳು ಸಲಹೆ ನೀಡಿದರು.
ಆದರೆ ಅದಕ್ಕೊಪ್ಪದ ದರ್ಶನ್ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗದೆ ಹಾಗೆಯೇ ಕೇರಳಕ್ಕೆ ಹೋದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.