ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ಅಪಘಾತದಿಂದ ಜೀವನಕ್ಕೆ ಅಪಾಯವಾಗದಿದ್ದರೂ ಜೀವನವನ್ನು ಬದಲಿಸಿತು: ದಿಗಂತ್

'ಟಿಕೆಟ್ ಟು ಬಾಲಿವುಡ್' ಸಿನೆಮಾದಲ್ಲಿ ನಟಿಸುತ್ತಿದ್ದ ಕನ್ನಡ ನಟ ದಿಗಂತ್ ಅವರಿಗೆ ಫೆಬ್ರವರಿಯಲ್ಲಿ ಅಪಘಾತವಾಗಿ ಕಣ್ಣಿಗೆ ತೀವ್ರ ಪೆಟ್ಟಾದರು, ಅವರ ದೈನಂದಿನ ಜೀವನದ ಚಟುವಟಿಕೆಗಳು ನಿಲ್ಲಲಿಲ್ಲ.

ಕಣ್ಣಿಗೆ ಪೆಟ್ಟು ಮಾಡಿಕೊಂಡಿರುವ ನಟ ದಿಗಂತ್
Guruprasad Narayana
Updated On : 17 May 2016, 11:31 am

ಬೆಂಗಳೂರು: 'ಟಿಕೆಟ್ ಟು ಬಾಲಿವುಡ್' ಸಿನೆಮಾದಲ್ಲಿ ನಟಿಸುತ್ತಿದ್ದ ಕನ್ನಡ ನಟ ದಿಗಂತ್ ಅವರಿಗೆ ಫೆಬ್ರವರಿಯಲ್ಲಿ ಅಪಘಾತವಾಗಿ ಕಣ್ಣಿಗೆ ತೀವ್ರ ಪೆಟ್ಟಾದರು, ಅವರ ದೈನಂದಿನ ಜೀವನದ ಚಟುವಟಿಕೆಗಳು ನಿಲ್ಲಲಿಲ್ಲ. ಚಿತ್ರೀಕರಣದ ವೇಳೆಯಲ್ಲಿ ಸಹನಟರೊಬ್ಬರು ಅವರೆಡೆಗೆ ಚೂಪಾದ ವಸ್ತುವೊಂದನ್ನು ಎಸೆದಾಗ ಅದು ಅವರ ಬಲಗಣ್ಣಿನ ಕಾರ್ನಿಯಾಗೆ ತಗುಲಿತ್ತು. "ಜೀವನಕ್ಕೆ ಅಪಾಯವೇನೂ ಆಗಲಿಲ್ಲ ಬದಲಾಗಿ ಅದು ಜೀವನವನ್ನು ಬದಲಿಸಿತು. ಧನಾತ್ಮಕವಾಗಿ ಯೋಚಿಸಿ, ವಿಶಾಲತೆಯಿಂದ ಇದನ್ನು ಎದುರಿಸಬೇಕಾಯಿತು" ಎನ್ನುತ್ತಾರೆ ನಟ.

ನಿಧಾನಕ್ಕೆ ಗುಣಮುಖರಾಗುತ್ತಿರುವ ದಿಗಂತ್ ಕಿರುತೆರೆಗೂ ಪಾದಾರ್ಪಣೆ ಮಾಡುತ್ತಿದ್ದು, 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮದ ತೀರ್ಪುಗಾರರಾಗಿಯೂ ಕಾಣಿಸಿಕೊಳ್ಳಲಿದ್ದಾರೆ.

"ಇದೇ ಮೊದಲ ಬಾರಿಗಿ ಟಿವಿ ವಾಹಿನಿಯಿಂದ ಅವಕಾಶ ಬಂದದ್ದು. ಟಿವಿ ಕಾರ್ಯಕ್ರಮಗಳ ತೀರ್ಪುಗಾರರಾಗಿ, ನಿರೂಪಕರಾಗಿ ಹಲವಾರು ನಟರು ಭಾಗಿಯಾಗುವುದನ್ನು ನೋಡಿದ್ದೀನಿ. ಆದುದರಿಂದ ನಾನೂ ಈ ಕೆಲಸಕ್ಕೆ ಮುಂದಾದೆ" ಎನ್ನುವ ದಿಗಂತ್, ಮಾಲಾಶ್ರಿ ಮತ್ತು ಭಾವನಾ ಜೊತೆಗೆ ಡ್ಯಾನ್ಸ್ ಕಾರ್ಯಕ್ರಮದ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

"ನನಗೆ ಡ್ಯಾನ್ಸ್ ಎಂದರೆ ಬಹಳ ಇಷ್ಟ. ಈ ರಿಯಾಲಿಟಿ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ಎಷ್ಟು ತೊಡಗಿಸಿಕೊಂಡು ಶ್ರಮ ಹಾಕಿದ್ದಾರೆ ಎಂಬುದು ನನಗೆ ಮುಖ್ಯ" ಎನ್ನುವ ದಿಗಂತ್ ಮಾರ್ಚ್ ೧೯ರಂದು ಕಾರ್ಯಕ್ರಮ ಮೊದಲ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸದ್ಯಕ್ಕೆ 'ಚೌಕ' ಸಿನೆಮಾದ ಚಿತ್ರೀಕರಣ ಮುಗಿಸಲಿರುವ ನಟ ನಾಲ್ಕು ತಿಂಗಳ ನಂತರ ಮುಂದಿನ ಯೋಜನೆಯನ್ನು ಕೈಗೆತ್ತಿಕೊಳ್ಳಲಿದ್ದಾರಂತೆ. "ಮತ್ತೊಂದು ಕಣ್ಣಿನ ಶಸ್ತ್ರಚಿಕಿತ್ಸೆ ಆಗಬೇಕಿದ. ಅದರ ನಂತರವೇ ಸಿನೆಮಾಗಳಲ್ಲಿ ನಟಿಸಲಿದ್ದೇನೆ. ನನ್ನ ಕಣ್ಣಿನ ಕಾರ್ನಿಯಾ ಮೇಲೆ ಹೊಲಿಗೆಗಳಿವೆ ಮತ್ತು ಅದು ಮಾಗಲು ಮೂರು ತಿಂಗಳು ಹಿಡಿಯುತ್ತದೆ. ಸದ್ಯಕ್ಕೆ ನನ್ನ ಎಡಗಣ್ಣು ಕೂಡ ಸರಿಯಾಗಿ ಕಾಣುತ್ತಿಲ್ಲ. ಕಾಂಟ್ಯಾಕ್ಟ್ ಕೇನ್ಸ್ ಹಾಕಿದ ಮೇಲಷ್ಟೇ ನನಗೆ ಸಂಪೂರ್ಣವಾಗಿ ಕಣ್ಣು ಕಾಣುವುದು. ನನ್ನ ಜೀವನಪೂರ್ತಿ ಅವನ್ನು ಹಾಕಬೇಕಾಗುತ್ತದೆ" ಎನ್ನುತ್ತಾರೆ ನಟ.

ಈ ಪೆಟ್ಟಿನ ಹೊರತಾಗಿಯೂ 'ಚೌಕ' ಸಿನೆಮಾದ ಭಾಗವಾಗಿದ್ದಕ್ಕೆ ಸಂತಸ ವ್ಯಕ್ತಪಡಿಸುವ ದಿಗಂತ್ "ಅದೃಷ್ಟವಶಾತ್ ಈ ಪಾತ್ರಕ್ಕೆ ಸದ್ಯಕ್ಕೆ ನಾನಿರುವ ಸ್ಥಿತಿಯ ನೋಟದ ಅವಶ್ಯಕತೆ ಇತ್ತು. ಆದುದರಿಂದ ಪೆಟ್ಟಿನ ಜೊತೆಗೇ ಚಿತ್ರೀಕರಣ ಮುಗಿಸಿದ್ದೇನೆ. ಬಾಲಿವುಡ್ ಸಿನೆಮಾದ ೯೦% ಚಿತ್ರೀಕರಣ ಕೂಡ ಮುಗಿಸಿದ್ದೇನೆ" ಎನ್ನುತ್ತಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments