ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ನಟಿ ಸುಧಾರಾಣಿ ಪುತ್ರಿ ನಿಧಿ ಗೋವರ್ಧನ್

ಕನ್ನಡ ನಟಿ ಸುಧಾರಾಣಿ ಸ್ಯಾಂಡಲ್‌ವುಡ್ ನಲ್ಲಿ ಒಂದು ಕಾಲದಲ್ಲಿ ಬಹುವಾಗಿ ಮಿಂಚಿದ ನಟಿ. ಸುಧಾರಾಣಿ ಅವರು ತೆರೆ ಮೇಲೆ ಅಭಿನಯಿಸಿದ ಒಂದೊಂದು ಪಾತ್ರಗಳು ...

ಸುಧಾರಾಣಿ ಮತ್ತು ನಿಧಿ ಗೋವರ್ಧನ್
Shilpa D
Updated On : 24 May 2016, 11:31 am

ಮೈಸೂರು : ಕನ್ನಡ ನಟಿ ಸುಧಾರಾಣಿ ಸ್ಯಾಂಡಲ್‌ವುಡ್ ನಲ್ಲಿ ಒಂದು ಕಾಲದಲ್ಲಿ ಬಹುವಾಗಿ ಮಿಂಚಿದ ನಟಿ. ಸುಧಾರಾಣಿ ಅವರು ತೆರೆ ಮೇಲೆ ಅಭಿನಯಿಸಿದ ಒಂದೊಂದು ಪಾತ್ರಗಳು ಇದಿಂಗೂ ಹಾಗೇ ನೆನಪಿನಲ್ಲಿ ಉಳಿಯುತ್ತವೆ. ಇದೀಗ ಸುಧಾರಾಣಿ ಅವರ ಹಾದಿಯಲ್ಲೇ ಮಗಳು ಕೂಡ ಸಾಗುತ್ತಿದ್ದಾಳೆ .

ಸುಧಾರಾಣಿ ಪುತ್ರಿ ಸದ್ದಿಲ್ಲದೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಮೊನ್ನೆ ಮೈಸೂರಿನಲ್ಲಿ ನಡೆದ ಮಾಡೆಲಿಂಗ್ ಕಾರ್ಯಕ್ರಮವೊಂದರಲ್ಲಿ ನಿಧಿ ಇದೇ ಮೊದಲ ಬಾರಿಗೆ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ರು. ಓದಿನಲ್ಲೇ ಆಸಕ್ತಿ ತೋರಿದ್ದ ನಿಧಿ ಈಗ ಜಾಹಿರಾತಿನಲ್ಲಿ ಮಿನುಗಿದ್ದಾರೆ. ಸದ್ಯಕ್ಕಿನ್ನೂ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ನಿಧಿಗೆ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನ. ಓದು ಮುಗಿದ ಬಳಿಕ ನಟನೆ ಬಗ್ಗೆ ಮಾತು ಎನ್ನುತ್ತಾರೆ.

ಇನ್ನು ಮೊದಲ ಬಾರಿಗೆ ರ್ಯಾಂಪ್ ವಾಕ್ ಮಾಡಿದ್ರೂ ನಿಧಿ ಮಾತ್ರ ಸ್ವಲ್ಪಾನೂ ಭಯಪಡಲಿಲ್ಲ. ತುಂಬಾನೇ ಧೈರ್ಯವಾಗಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ನೆರೆದಿದ್ದವರಿಂದ ಶಹಬ್ಬಾಸ್ ಗಿರಿ  ಪಡೆದರು. ಮಗಳು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದನ್ನು ನೋಡಿ ಸುಧಾರಾಣಿಯಂತೂ ಫುಲ್ ಖುಷಿಯಾಗಿದ್ದಾರಂತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement