'ಕರ್ವ' ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

ಸಿಂಹಳಿ ಭಾಷೆಗೆ ಡಬ್ ಆಗಲಿರುವ 'ಕರ್ವ'

ಸಿಂಹಳಿ ಭಾಷೆಗೆ ಡಬ್ ಆಗಲಿರುವ ಮೊದಲ ಕನ್ನಡ ಸಿನೆಮಾ 'ಕರ್ವ' ಎಂಬ ಹೆಗ್ಗಳಿಕೆಗೆ ಬಿಡುಗಡೆಗೆ ಮುಂಚಿತವಾಗಿಯೇ ಒಳಪಟ್ಟಿದೆ. ಚೊಚ್ಚಲ ಬಾರಿಗೆ ನವನೀತ್ ನಿರ್ದೇಶನದ ಹಾರರ್-ಥ್ರಿಲ್ಲರ್ 'ಕರ್ವ'

ಬೆಂಗಳೂರು: ಸಿಂಹಳಿ ಭಾಷೆಗೆ ಡಬ್ ಆಗಲಿರುವ ಮೊದಲ ಕನ್ನಡ ಸಿನೆಮಾ 'ಕರ್ವ' ಎಂಬ ಹೆಗ್ಗಳಿಕೆಗೆ ಬಿಡುಗಡೆಗೆ ಮುಂಚಿತವಾಗಿಯೇ ಒಳಪಟ್ಟಿದೆ. ಚೊಚ್ಚಲ ಬಾರಿಗೆ ನವನೀತ್ ನಿರ್ದೇಶನದ ಹಾರರ್-ಥ್ರಿಲ್ಲರ್ 'ಕರ್ವ' ಸಿನೆಮಾವನ್ನು ಕೃಷ್ಣ ಚೈತನ್ಯ ನಿರ್ಮಿಸಿದ್ದಾರೆ.

ಶ್ರೀಲಂಕಾದ ಖ್ಯಾತ ನಟರೊಬ್ಬರಿಗೆ ನಿರ್ಮಾಪಕರನ್ನು ಅವರ ಗೆಳೆಯ ಪರಿಚಯ ಮಾಡಿಕೊಟ್ಟರಂತೆ. ಅವರು 'ಕರ್ವ' ಸಿನೆಮಾದ ಡಬ್ ಆವೃತ್ತಿಯನ್ನು ಬಿಡುಗಡೆ ಮಾಡಲು ಉತ್ಸಾಹ ತೋರಿದ್ದಾರಂತೆ. "ಸಬ್ ಟೈಟಲ್ಸ್ ಸಿದ್ಧಪಡಿಸಲು ಅವರು ಕೇಳಿಕೊಂಡಿದ್ದಾರೆ ನಂತರ ಅವರು ಈ ಯೋಜನೆಯನ್ನು ಮುಂದುವರೆಸಲಿದ್ದಾರೆ. ಇದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಆದರೆ ಅವರು ಆಸಕ್ತಿ ತೋರಿರುವುದರಿಂದ ಈ ಸಿನೆಮಾವನ್ನು ಅಲ್ಲಿಗೆ ಕೊಂಡೊಯ್ಯಲ್ಲಿದ್ದೇವೆ" ಎನ್ನುತ್ತಾರೆ ಚೈತನ್ಯ.

ಆಸಕ್ತಿದಾಯಕ ಎಂದರೆ ಈ ಸಿನೆಮಾ ಪ್ರಮುಖ ದೃಶ್ಯಗಳನ್ನು ಶ್ರೀಲಂಕಾದಲ್ಲಿ ಚಿತ್ರೀಕರಿಸಲಾಗಿದೆಯಂತೆ. ಇದು ಕೂಡ ಅಲ್ಲಿ ಬಿಡುಗಡೆಗೆ ಸಹಾಯ ಮಾಡಲಿದೆಯಂತೆ. ಕರ್ನಾಟಕದಲ್ಲಿ ಈ ವಾರ ಬಿಡುಗಡೆಯಾಗಲಿರುವ 'ಕರ್ವ'ದಲ್ಲಿ ದೇವರಾಜ್, ತಿಲಕ್ ಶೇಖರ್, ಆರ್ ಜೆ ರೋಹಿತ್ ಮುಂತಾದವರು ನಟಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!