ಬೆಂಗಳೂರು: ನಟ ಶರಣ್ ತಮ್ಮ ಮುಂದಿನ ಚಿತ್ರ 'ನಟರಾಜ ಸರ್ವಿಸ್' ಬಿಡುಗಡೆಗೆ ಸಿದ್ಧರಾಗಿದ್ದಾರೆ. ಕೇಂದ್ರ ಸರ್ಕಾರ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆದಿರುವ ನಿರ್ಧಾರದಿಂದ ರಾಜ್ಯದ ಜನತೆಯೆಲ್ಲಾ ಎಟಿಎಂ ಮತ್ತು ಬ್ಯಾಂಕ್ ಗಳ ಕಡೆದು ನಡೆದು ಹೋಗುತ್ತಿದ್ದರೆ, ಇತ್ತ ಸಿನೆಮಾಗಳ ಕಡೆಗೆ ನಡೆದು ಬರಿರುತ್ತಿರುವ ಜನರ ಸಂಖ್ಯೆ ಕ್ಷೀಣಿಸುತ್ತಿದೆ ಎಂಬುದು ಗಾಂಧಿನಗರದ ಅಳಲು.
ಈಮಧ್ಯೆ 'ನಟರಾಜ ಸರ್ವಿಸ್' ಸಿನೆಮಾ ನೋಡಲು ಬರುವ ಜನರಿಂದ ನಾವು ೫೦೦ ಮತ್ತು ೧೦೦೦ ರೂ ನೋಟುಗಳನ್ನು ಸ್ವೀಕರಿಸಲಿದ್ದೇವೆ ಎಂದು ಘೋಷಿಸಿದ್ದ ತಂಡ ಈಗ ಯು-ಟರ್ನ್ ಹೊಡೆದಿದೆ. "ಜನರ ಗಮನವನ್ನು ಸೆಳೆಯಲು ನಮ್ಮ ವಿತರಕರು ಹಾಗೆ ಹೇಳಿದ್ದರು, ಆದರೆ ತಾಂತ್ರಿಕವಾಗಿ ಅದು ಸಾಧ್ಯವಿಲ್ಲ" ಎಂದಿದ್ದಾರೆ ನಟ ಶರಣ್.
ಚಲನಚಿತ್ರದಲ್ಲಿ ನಟರಾಜನ ಪಾತ್ರ ನಿರ್ವಹಿಸಿರುವ ಶರಣ್ "ನಟರಾಜ ಭೂಮಿಯ ಮೇಲೆ ಅತಿ ಸಂತಸದ ವ್ಯಕ್ತಿ ಮತ್ತು ಜನ ಇವೊತ್ತು ಬದುಕಲು ಇಶ್ಟ ಪಡುವುದು ಹಾಗೆಯೇ" ಎನ್ನುತ್ತಾರೆ.
ಎನ್ ಎಸ್ ರಾಜಕುಮಾರ್ ನಿರ್ಮಾಣದ, ಪವನ್ ಒಡೆಯರ್ ನಿರ್ದೇಶನದ ಈ ಸಿನೆಮಾದಲ್ಲಿ ಮಯೂರಿ ನಾಯಕ ನಟಿ. ಅನೂಪ್ ಸೀಳಿನ್ ಸಂಗೀತ ನೀಡಿದ್ದು, ಅರುಳ್ ಕೆ ಸೋಮಸುಂದರಂ ಅವರ ಸಿನೆಮ್ಯಾಟೋಗ್ರಾಫಿ ಚಿತ್ರಕ್ಕಿದೆ.