ಬೆಂಗಳೂರು: ಲೂಸಿಯಾ ಮೂಲಕ ನಾಯಕನಟಿಯಾಗಿ ಪಾದಾರ್ಪಣೆ ಮಾಡಿದ ನಟಿ ಶ್ರುತಿ ಹರಿಹರನ್, ತಾವು ನಿರ್ವಹಿಸಿದ ಹಲವು ಪಾತ್ರಗಳಿಗೆ ಪ್ರಶಂಸೆಗೆ ಪಾತ್ರರಾದವರು. ಈಗ 'ಮಾದ ಮತ್ತು ಮಾನಸಿ' ಬಿಡುಗಡೆಗೆ ಸಿದ್ಧವಾಗಿದ್ದು, ಇದು ತಮ್ಮ ಎರಡನೇ ಸಂಪೂರ್ಣ ಕಮರ್ಷಿಯಲ್ ಸಿನೆಮಾ ಎನ್ನುತ್ತಾರೆ.
ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಟ. "ಈ ಸಿನೆಮಾದಲ್ಲಿ ಮನೋ ಮೂರ್ತಿ ಅವರು ತೊಡಗಿಸಿಕೊಂಡಿದ್ದರಿಂದ ಈ ಯೋಜನೆ ಒಪ್ಪಿಕೊಂಡೆ. ಈ ಸಿನೆಮಾದಲ್ಲಿ ಸಂಗೀತ ನಿರ್ದೇಶಕ ನಿರ್ಮಾಪಕನಾಗಿ ಹೊರಹೊಮ್ಮಿದ್ದಾರೆ" ಎನ್ನುತ್ತಾರೆ ಶ್ರುತಿ.
ನಾನು ಈ ಸಿನೆಮಾದಲ್ಲಿ ಸಂಪೂರ್ಣ ನಿರ್ದೇಶಕನ ನಟಿಯಾಗಿದ್ದೆ ಎನ್ನುವ ಅವರು, ಸತೀಶ್ ಪ್ರಧಾನ್ ಅವರಿಗೆ ಬೇಕಂತೆ ನಟಿಸಿದ್ದೇನೆ ಎನ್ನುತ್ತಾರೆ. "ನಟನೆ ಬಿಟ್ಟು ಈ ಸಿನೆಮಾಗೆ ನಿಮ್ಮ ಕೊಡುಗೆ ಏನೆಂದು ಕೇಳಿದರೆ, ಏನು ಇಲ್ಲ ಎನ್ನುತ್ತೇನೆ. ಏಕೆಂದರೆ ಸತೀಶ್ ಅವರಿಗೆ ಬೇಕಾದಂತೆ ಈ ಪಾತ್ರದಲ್ಲಿ ನಾನು ನಟಿಸಿದ್ದೇನೆ" ಎನ್ನುತ್ತಾರೆ ನಟಿ.
ಈ ಸಿನೆಮಾದಲ್ಲಿ ಅಂಧ ಯುವತಿಯ ಪಾತ್ರದಲ್ಲಿ ನಟಿಸಿದ್ದೇನೆ ಎನ್ನಿವ ಶ್ರುತಿ "ಸಿನೆಮಾಗೆ ಒಪ್ಪಿಗೆ ನೀಡುವುದಕ್ಕೆ ಮುಂಚಿತವಾಗಿ ಅದು ನನಗೆ ತಿಳಿದಿರಲ್ಲ. ಎರಡು ಹಂತಗಳ ಚಿತ್ರೀಕರಣವಾದ ಮೇಲಷ್ಟೇ ಅವರು ಅದನ್ನು ನನಗೆ ತಿಳಿಸಿದ್ದು. ನಾನು ನಟಿಸುವಾಗ ಮಾನಿಟರ್ ನೋಡುವುದಿಲ್ಲವಾದ್ದರಿಂದ, ಇದು ಹೇಗೆ ಮೂಡಿಬಂದಿದೆ ಎಂದು ಹೇಳಲಾರೆ. ನಾನು ಸತೀಶ್ ಅವರನ್ನು ಸಂಪೂರ್ಣವಾಗಿ ನಂಬುತ್ತೇನೆ" ಎಂದು ತಿಳಿಸುತ್ತಾರೆ ಶ್ರುತಿ.