ಚೆನ್ನೈ: ತಮಿಳಿನ ಸೂಪರ್ ಹಿಟ್ ಸಿಂಗಂ ಸರಣಿಯ ಮೂರನೇ ಆವೃತ್ತಿ ಸಿಂಗಂ-3 ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು ಈ ಮಧ್ಯೆ ಸಿಂಗಂ-3 ಚಿತ್ರದಲ್ಲಿ ಬಾಹುಬಲಿ ಪ್ರಭಾಸ್ ಚಿಕ್ಕ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿಯನ್ನು ನಿರ್ಮಾಪಕರು ತಳ್ಳಿಹಾಕಿದ್ದಾರೆ.
ಸಿಂಗಂ-3 ಚಿತ್ರದಲ್ಲಿ ಪ್ರಭಾಸ್ ಅವರು ಅಭಿನಯಿಸುತ್ತಿಲ್ಲ. ಇದು ಗಾಳಿ ಸುದ್ದಿ ಎಂದು ನಿರ್ಮಾಪಕ ಜ್ಞಾನವೇಲ್ ರಾಜಾ ಅವರು ತಿಳಿಸಿದ್ದಾರೆ.
ಪ್ರಾಮಾಣಿಕ ಮತ್ತು ದಕ್ಷ ಪೊಲೀಸ್ ಅಧಿಕಾರಿ ಯಾಗಿ ಸಿಂಗಂ-3 ಚಿತ್ರದ ಮೂಲಕ ಮತ್ತೆ ಕಾಲಿವುಡ್ ನಟ ಸೂರ್ಯ ತೆರೆಯ ಮೇಲೆ ವಿಜ್ರಂಭಿಸಲಿದ್ದಾರೆ. ಸದ್ಯ ಚಿತ್ರ ತಂಡ ಸೋಮವಾರ ರಾತ್ರಿ 10 ದಿನಗಳ ಶೂಟಿಂಗ್ ಗಾಗಿ ಮಲೇಷ್ಯಾಗೆ ತೆರಳಿದೆ ಎಂದರು.
ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಮತ್ತು ಶೃತಿ ಹಾಸನ್ ಅಭಿನಯದ್ದು ಈ ಚಿತ್ರದಲ್ಲಿ ವಿಲನ್ ಆಗಿ ಠಾಕೂರ್ ಅನೂಪ್ ಸಿಂಗ್ ಅವರನ್ನು ಪರಿಚಯಿಸಲಾಗುತ್ತಿದೆ. ಮೂಲ ತಮಿಳು ಹಾಗೂ ತೆಲುಗು ಆವತರಣಿಕೆಯ ಚಿತ್ರ ದೇಶಾದ್ಯಂತ ಡಿಸೆಂಬರ್ 16ರಂದು ಬಿಡುಗಡೆಯಾಗಲಿದೆ ಎಂದರು ನಿರ್ಮಾಪಕರು ತಿಳಿಸಿದ್ದಾರೆ.