ನಂಜುಂಡಿ ಕಲ್ಯಾಣ ಚಿತ್ರದಲ್ಲಿ ಮಾಲಾಶ್ರೀ-ರಾಘವೇಂದ್ರ ರಾಜ್ ಕುಮಾರ್ 
ಸಿನಿಮಾ ಸುದ್ದಿ

ಮತ್ತೆ ನಂಜುಂಡಿ ಕಲ್ಯಾಣ

ಎಂ.ಎಸ್. ರಾಜಶೇಖರ್ ನಿರ್ದೇಶನದ ರಾಘವೇಂದ್ರ ರಾಜ್ ಕುಮಾರ್ ಹಾಗೂ ಮಾಲಾಶ್ರೀ ಅಭಿನಯದ 1989ರಲ್ಲಿ ಬಿಡುಗಡೆಯಾದ...

ಎಂ.ಎಸ್. ರಾಜಶೇಖರ್ ನಿರ್ದೇಶನದ ರಾಘವೇಂದ್ರ ರಾಜ್ ಕುಮಾರ್ ಹಾಗೂ ಮಾಲಾಶ್ರೀ ಅಭಿನಯದ 1989ರಲ್ಲಿ ಬಿಡುಗಡೆಯಾದ ಚಿತ್ರ ನಂಜುಂಡಿ ಕಲ್ಯಾಣ ಸೂಪರ್ ಹಿಟ್ ಆಗಿದ್ದು ಈಗ ಇತಿಹಾಸ. ಚಿತ್ರದ ಹಾಡುಗಳು ಕೂಡ ಇಂದಿಗೂ ಜನಮಾನಸದಿಂದ ಮರೆಯಾಗಿಲ್ಲ.
27 ವರ್ಷಗಳು ಕಳೆದ ನಂತರ ಇಂದು ಅದೇ ಶೀರ್ಷಿಕೆ ಇಟ್ಟುಕೊಂಡು ಹೊಸ ಬಗೆಯ ಚಿತ್ರವನ್ನು ತಯಾರಿಸಲಿದೆ ಮತ್ತೊಂದು ಚಿತ್ರತಂಡ. ಈ ಹೊಸ ನಂಜುಂಡಿ ಕಲ್ಯಾಣ ಚಿತ್ರಕ್ಕೆ ತನುಷ್ ಹೀರೋ. ಮಡಮಕ್ಕಿ ಬಳಿಕ ತನುಷ್ ನಟಿಸುತ್ತಿರುವ ಚಿತ್ರವಿದು. ಚಿತ್ರಕ್ಕೆ ರಾಜೇಂದ್ರ ಕಾರಂತ್ ನಿರ್ದೇಶಕರು. ಈ ಹಿಂದೆ ರಾಜೇಂದ್ರ ಕಾರಂತ್ ಮಂಗನ ಕೈಯಲ್ಲಿ ಮಾಣಿಕ್ಯ ಎಂಬ ಹಾಸ್ಯ ಪ್ರಧಾನ ಚಿತ್ರ ನಿರ್ದೇಶಿಸಿದ್ದರು. ಈಗ ಮತ್ತೊಂದು ಹಾಸ್ಯ ಪ್ರಧಾನ ಚಿತ್ರ ನಿರ್ದೇಶಿಸಲು ಹೊರಟಿದ್ದಾರೆ. 
ಅಮ್ಮ ಮಗನಿಗೆ ಹೆಣ್ಣು ಹುಡುಕಿ ಮದುವೆ ಮಾಡಿಸಲು ಪಡುವ ಸಾಹಸವೇ ನಂಜುಂಡಿ ಕಲ್ಯಾಣ ಚಿತ್ರದ ಸಾರಾಂಶ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿ ಕೂಡ ರಾಜೇಂದ್ರ ಕಾರಂತ್ ಅವರದ್ದೇ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ

'ನನ್ನ ಚೋಲಿ ಬಗ್ಗೆ 6 ಜನರಿಂದ ಪ್ಯಾನಲ್ ಡಿಸ್ಕಷನ್, ಸಂಸ್ಕೃತಿ ಬಟ್ಟೆಯಲ್ಲ, ಹೃದಯದಲ್ಲಿದೆ'; ರಾಖಿ ಜಾಹೀರಾತು ವಿವಾದ ಬಗ್ಗೆ ಮೌನ ಮುರಿದ ನಟಿ Kriti Sanon

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ