ಸಿನಿಮಾ ಸುದ್ದಿ

ಲೂಸ್ ಮಾದ ಯೋಗಿಗೆ ಕೂಡಿ ಬಂದ ಕಂಕಣ ಭಾಗ್ಯ

Shilpa D

ಬೆಂಗಳೂರು: ಲೂಸ್‌ ಮಾದ ಖ್ಯಾತಿಯ ಯೋಗಿ ತಾವು ಪ್ರೀತಿಸಿದ ಹುಡುಗಿ ಜೊತೆ ಸಪ್ತಪದಿ ತುಳಿಯಲಿದ್ದಾರೆ.

ತಮ್ಮ ದೀರ್ಘ ಕಾಲದ ಗೆಳತಿ ಐಟಿ ಉದ್ಯೋಗಿ ಸಾಹಿತ್ಯ ಎಂಬಾಕೆ ಜೊತೆ ಯೋಗಿಗೆ ಪ್ರೇಮಾಂಕುರವಾಗಿದ್ದು ಮುಂದಿನ ವರ್ಷ ಹಸಮಣೆ ಏರಲಿದ್ದಾರಂತೆ.

ಎರಡು ಕುಟುಂಬದವರು ಮುಂದೆ ನಿಂತು ಯೋಗಿ ಮತ್ತು ಸಾಹಿತ್ಯ ಅವರ ಮದುವೆಯನ್ನು ಮಾಡುವುದಕ್ಕೆ ತೀರ್ಮಾನಿಸಿದ್ದಾರೆ. ಆದರೆ ಯೋಗಿಗೆ ಒಬ್ಬ ಅಣ್ಣನಿದ್ದು, ಅಣ್ಣನ ಮದುವೆಯ ನಂತರವೇ ಸಾಹಿತ್ಯ ಮತ್ತು ಯೋಗಿ ವಿವಾಹ ನಡೆಯಲಿದೆ.

SCROLL FOR NEXT