ಸೂಪರ್ ಸ್ಟಾರ್ ಮೋಹನ್ ಲಾಲ್ 
ಸಿನಿಮಾ ಸುದ್ದಿ

ಆನೆ ದಂತ ಹೊಂದಿದ್ದ ಸೂಪರ್ ಸ್ಟಾರ್ ಮೋಹನ್ ಲಾಲ್ ವಿರುದ್ಧ ತನಿಖೆಗೆ ಆದೇಶಿಸಿದ ನ್ಯಾಯಾಲಯ

ಆನೆ ದಂತ ಇಟ್ಟುಕೊಂಡಿದ್ದರು ಎಂಬ ಆರೋಪ ಎದುರಿಸುತ್ತಿರುವ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ವಿರುದ್ಧ ತನಿಖೆ ನಡೆಸುವಂತೆ ಜಾಗೃತ ಇಲಾಖೆಗೆ ಶನಿವಾರ ನ್ಯಾಯಾಲಯ

ಕೊಚ್ಚಿ: ಆನೆ ದಂತ ಇಟ್ಟುಕೊಂಡಿದ್ದರು ಎಂಬ ಆರೋಪ ಎದುರಿಸುತ್ತಿರುವ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ವಿರುದ್ಧ ತನಿಖೆ ನಡೆಸುವಂತೆ ಜಾಗೃತ ಇಲಾಖೆಗೆ ಶನಿವಾರ ನ್ಯಾಯಾಲಯ ಆದೇಶಿಸಿದೆ. 
ವನ್ಯಜೀವಿ ಕಾರ್ಯಕರ್ತ ಎ ಎ ಪೌಲೋಸ್ ಎಂಬುವವರು ನೀಡಿರುವ ದೂರಿನ ಮೇರೆಗೆ ಈ ತನಿಖೆ ನಡೆಸಿ ನವೆಂಬರ್ 28 ರೊಳಗೆ ವರದಿ ಸಲ್ಲಿಸುವಂತೆ ಮಾವುಟ್ಟುಪುಳ ಜಾಗೃತಿ ನ್ಯಾಯಾಲಯ ಆದೇಶಿಸಿದೆ. 
ಮೋಹನ್ ಲಾಲ್ ಅಲ್ಲದೆ ಹಿಂದಿನ ಅರಣ್ಯ ಸಚಿವ ತಿರುವಂಚೂರ್ ರಾಧಾಕೃಷ್ಣ ಮತ್ತು ಇತರ ಮೂರೂ ಜನರ ಪಾತ್ರವನ್ನು ತನಿಖೆ ಮಾಡಲು ಆದೇಶಿಸಲಾಗಿದೆ. 
2011 ರಲ್ಲಿ ಆದಾಯ ತೆರಿಗೆ ಇಲಾಖೆ ನಟನ ಮನೆಯ ಮೇಲೆ ದಾಳಿ ನಡೆಸಿ ಆನೆ ದಂತಗಳನ್ನು ವಶಪಡಿಸಿಕೊಂಡಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. 
2012 ರಲ್ಲಿ ಅರಣ್ಯ ಇಲಾಖೆ ಮೋಹನ್ ಲಾಲ್ ಮತ್ತು ಇನ್ನಿಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಎಫ್ ಐ ಆರ್ ಹಾಕಿದ್ದರು. ಎಫ್ ಐ ಆರ್ ನಲ್ಲಿ ನಟನನ್ನು ಮೊದಲ ಆಪಾದಿತನನ್ನಾಗಿ ಹೆಸರಿಸಲಾಗಿತ್ತು. 
ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಕಾಯ್ದೆಯ ಪ್ರಕಾರ ಆನೆ ದಂತಗಳನ್ನು ವಶದಲ್ಲಿಟ್ಟುಕೊಳ್ಳುವುದು ಅಪರಾಧ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಮೇಲೆ ಅಮೆರಿಕ ನೌಕಾಪಡೆ ದಿಗ್ಬಂಧನ ಜಾರಿ; ಬಂದರುಗಳಲ್ಲಿ ನಿರ್ಬಂಧ ಖಚಿತಪಡಿಸಿದ ಯುಕೆ!

IPL 2026: ರಾಜಸ್ಥಾನದ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಗೆ 57 ರನ್ ಗಳ ಜಯ; ಒಂದೇ ಓವರ್ ನಲ್ಲಿ 3 ವಿಕೆಟ್; ಚರಿತ್ರೆ ಸೃಷ್ಟಿಸಿದ ಪ್ರಫುಲ್ ಹಿಂಗೆ

No Toll For Indian Tankers': ಅಮೆರಿಕ ದಿಗ್ಬಂಧನ ನಡುವೆ ಹಾರ್ಮುಜ್ ಜಲಸಂಧಿ ಮೂಲಕ ಭಾರತೀಯ ಹಡಗು ಸಾಗಲು ಇರಾನ್ ಭರವಸೆ!

ರಾಮ ಮಂದಿರದಲ್ಲಿ 'ಸಾಂಕೇತಿಕ ಜ್ಯೋತಿ' ಹಿಂದೂ ಸಂಪ್ರದಾಯಕ್ಕೆ ವಿರುದ್ಧ: ಸ್ವಾಮಿ ಅವಿಮುಕ್ತೇಶ್ವರಾನಂದ್ ಆಕ್ಷೇಪ

Video: ಹಾಸನದಲ್ಲಿ ಸಿನಿಮೀಯ ಶೈಲಿಯ ವಿಚಿತ್ರ ಘಟನೆ; ಪತಿ, ಮಗು ತೊರೆದು ಕಾರಿನಲ್ಲೇ ಪ್ರಿಯಕರನ ಜತೆ ಮಹಿಳೆ ಮದುವೆ!

SCROLL FOR NEXT