ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ನಟ ಕಮಲ್ ಹಾಸನ್ ಈ ವರ್ಷ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.
ಈ ಸಂಬಂಧ ತಮ್ಮ ಅಭಿಮಾನಿಗಳಿಗೆ ತಮಿಳಿನಲ್ಲಿ ಟ್ವೀಟ್ ಮಾಡಿರುವ ಅವರು, ಜಯಲಲಿತಾ ಅವರ ಅನಾರೋಗ್ಯದ ಕಾರಣ ಯಾು ತಮ್ಮ ಹುಟ್ಟು ಹಬ್ಬ ಆಚರಿಸಬಾರದು ಎಂದು ಮನವಿ ಮಾಡಿದ್ದಾರೆ.
ನವೆಂಬರ್ 7 ರಂದು ಕಮಲ್ ಹಾಸನ್ ಹುಟ್ಟು ಹಬ್ಬವಿದ್ದು, 63 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಇತ್ತೀಚೆಗೆ ಕಾಲು ಮುರಿತದಿಂದಾಗಿ ಕಮಲ್ ಹಾಸನ್ ಆಸ್ಪತ್ರೆ ಸೇರಿದ್ದರು.